ನೀವು ಈ ಅಭ್ಯಾಸ ಬೆಳೆಸಿಕೊಂಡ್ರೆ ನಿಮ್ಮ ಆಯಸ್ಸು ಹೆಚ್ಚಾಗುತ್ತೆ

29 March 2025

Pic credit - Pintrest

Sainanda

ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯಕರವಲ್ಲದ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ಜೀವಿತಾವಧಿಯು ಕಡಿಮೆಯಾಗುತ್ತಿದೆ.

Pic credit - Pintrest

ಜೀವಿತಾವಧಿ ಹೆಚ್ಚಿಸಲು ಆರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿಯಿರಲಿ. ಒತ್ತಡವನ್ನು ಆದಷ್ಟು ತಪ್ಪಿಸಿ.

Pic credit - Pintrest

ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ ಹಾಗೂ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ರಿಸಿ.

Pic credit - Pintrest

ಸ್ನಾಯು ದೌರ್ಬಲ್ಯವನ್ನು ತಡೆಗಟ್ಟಲು ನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

Pic credit - Pintrest

ಸಣ್ಣ ಸಣ್ಣ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಯಾವಾಗಲೂ ಸಂತೋಷವಾಗಿರಿ.

Pic credit - Pintrest

ಬೊಜ್ಜು, ದೇಹದ ತೂಕವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಆಹಾರ ಕ್ರಮ ಸರಿಯಾಗಿರಲಿ. ದೇಹ ದಂಡಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

Pic credit - Pintrest

ನಿಮಗೆ ಧೂಮಪಾನ ಮಾಡುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ. ಮದ್ಯಪಾನ ಸೇವನೆಯನ್ನು ಮಿತಗೊಳಿಸಿ.

Pic credit - Pintrest

ಆಹಾರದಲ್ಲಿ ಹಣ್ಣುಗಳು, ತರಕಾರಿಗಳ ಸೇವನೆ ಹೆಚ್ಚಿರಲಿ, ಅತಿಯಾಗಿ ಎಣ್ಣೆ ಪದಾರ್ಥಗಳನ್ನು ಸೇವಿಸಬೇಡಿ.

Pic credit - Pintrest

ಕೆಂಪು ಮಾಂಸ ಸೇವನೆಯನ್ನು ಆದಷ್ಟು ತಪ್ಪಿಸಿ. ಪ್ರತಿದಿನ ಮೀನು ಹಾಗೂ ಅಗಸೆ ಬೀಜದಂತಹ ಒಮೆಗಾ -3, ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರ ಸೇವಿಸಿ.

Pic credit - Pintrest