ಅಸ್ತಮಕ್ಕೆ ಈ ಎಲೆಯಲ್ಲಿದೆ ಮದ್ದು
TV9 Kannada Logo For Webstory First Slide

29 March 2025

Pic credit -  Pintrest

 By: Preethi Bhat

ಅಸ್ತಮಕ್ಕೆ ಈ ಎಲೆಯಲ್ಲಿದೆ ಮದ್ದು

ಪುದೀನಾ ಎಲೆಗಳನ್ನು ನಮ್ಮ ಆಹಾರದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ.

Pic credit -  Pintrest

ಪುದೀನಾ ಎಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ಫೋಲೇಟ್ ಸೇರಿದಂತೆ ನಾನಾ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.

Pic credit -  Pintrest

ಆಗಾಗ ನೆಗಡಿ ಅಥವಾ ಶೀತದಂತಹ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪುದೀನ ರಸವನ್ನು ಸೇವಿಸಬೇಕು. ಪುದೀನ ರಸವು ನೈಸರ್ಗಿಕವಾಗಿಯೇ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶದ ದಟ್ಟಣೆಯನ್ನು ತೆರವುಗೊಳಿಸುತ್ತದೆ.

Pic credit -  Pintrest

ಪುದೀನಾ ಎಲೆಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತದೆ.

Pic credit -  Pintrest

ಪುದೀನಾ ಎಲೆಗಳು ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಮೊಡವೆಗಳಿಂದ ಮುಕ್ತಿ ನೀಡುವುದಲ್ಲದೆ ಇತರ ಚರ್ಮದ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ.

Pic credit -  Pintrest

ಪುದೀನಾ ಎಲೆಗಳು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪುದೀನಾ ಎಲೆಗಳನ್ನು ಪ್ರತಿನಿತ್ಯ ಸೇವನೆ ಮಾಡಬಹುದು.

Pic credit -  Pintrest

ಪುದೀನಾ ಎಲೆಗಳು ಗರ್ಭಿಣಿಯರಲ್ಲಿ ಕಂಡು ಬರುವ ವಾಕರಿಕೆ ಮತ್ತು ಬೆಳಗಿನ ಅನಾರೋಗ್ಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

Pic credit -  Pintrest

ಪುದೀನದಲ್ಲಿ ಇರುವ ಮೆಂಥಾಲ್ ಡಿಕೊಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.

Pic credit -  Pintrest

ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯವಾಗುವಂತೆ ಮಾಡುತ್ತದೆ. ಆದರೆ ಪುದೀನವನ್ನು ಮಿತಿ ಮೀರಿ ಸೇವಿಸಬಾರದು.

Pic credit -  Pintrest