29-11-2023
ಸಂವಿಧಾನವೇ ನಮಗೆ ಧರ್ಮ: ಕಾಗಿನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ
Author: ಗಣಪತಿ ಶರ್ಮ
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಭಾವೈಕ್ಯತೆ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಸೇವೆ ಮಾಡುವಾಗ ಜಾತಿ, ಧರ್ಮ ಇರಬಾರದು. ಸಂವಿಧಾನವೇ ನಮಗೆ ಧರ್ಮ, ಅದರಂತೆ ನಡೆಯಬೇಕು: ಸಿದ್ದರಾಮಯ್ಯ
ಟೀಕೆಗಳು ಬರುತ್ತವೆ, ಎದುರಿಸುತ್ತೇವೆ. ಮುಖ್ಯಮಂತ್ರಿ ಆಗಿ ಅನೇಕ ಜನಪರ ಕೆಲಸ ಮಾಡಿದ್ದೇನೆ: ಸಿದ್ದರಾಮಯ್ಯ
ಜನರಿಗೆ ಕೊಟ್ಟ ಭರವಸೆಯನ್ನು ನಾವು ಮರೆಯಬಾರದು. ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಹೇಳಿದ್ದೆ.
ನನ್ನನ್ನು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಡೋಂಗಿ ಎಂದರು. ಬೆಂಗಳೂರಿಗೆ ಬನ್ನಿ, ತೋರಿಸುತ್ತೇನೆ ಎಂದರೆ ಅವರು ಬರಲೇ ಇಲ್ಲ.
ಕನಕ ಮಠ ಸ್ಥಾಪಿಸುವಾಗ ವಿಶ್ವನಾಥ್, ನಾವೆಲ್ಲ ಸೇರಿ ಕುರುಬರ ಮಠ ಆಗಬಾರದು ಎಂದು ಅಂದುಕೊಂಡಿದ್ದೆವು.
ಇವತ್ತಿನ ಸಮಾವೇಶ ಬಹಳ ಅರ್ಥಪೂರ್ಣ. ಮನುಧರ್ಮ ಅಲ್ಲ, ಮನುಷ್ಯನ ಧರ್ಮ ಆಗಬೇಕು: ಸಿದ್ದರಾಮಯ್ಯ
ಧರ್ಮದ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ, ಅದನ್ನೆಲ್ಲ ನೀವು ನಂಬಬೇಡಿ: ಸಿದ್ದರಾಮಯ್ಯ
NEXT - ಆಂಬುಲೆನ್ಸ್ ಕೊರತೆ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?