29-11-2023

ಆಂಬುಲೆನ್ಸ್ ಕೊರತೆ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

Author: ಗಣಪತಿ ಶರ್ಮ

ನಮ್ಮ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಆರೋಗ್ಯ ಇಲಾಖೆ ಹಲವು ಕ್ರಮ ತೆಗದುಕೊಂಡಿದೆ.

ಗುರುವಾರ 262 ಹೊಸ ಅಂಬುಲೆನ್ಸ್ ಗಳನ್ನು ಸೇರ್ಪಡೆ ಮಾಡಲಿದ್ದೇವೆ.

ಈಗಾಗಲೇ ಇರುವ ಅಂಬುಲೆನ್ಸ್ ಗಳು ಹಾಳಾಗಿದ್ದವು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಆಂಬುಲೆನ್ಸ್ ಕಡಿಮೆ ಇವೆ.

ಹೊಸ ಆಂಬುಲೆನ್ಸ್ ಗಳನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ: ಗುಂಡೂರಾವ್

ಪುನೀತ್ ಹೃದಯ ಜ್ಯೋತಿ ಯೋಜನೆಯನ್ನು ಆರಂಭಿಸಿದ್ದೇವೆ. ಹೃದಯಾಘಾತ ತಡೆಯಲು ಈ ಯೋಜನೆ ಜಾರಿ ಮಾಡಲಾಗಿದೆ.

ಉಚಿತವಾಗಿ 35-45 ಸಾವಿರ ರೂ. ಬೆಲೆ ಬಾಳುವ ಇಂಜೆಕ್ಷನ್ ನೀಡುತ್ತಿದ್ದೇವೆ: ಗುಂಡೂರಾವ್

ಆಂಧತ್ವ ನಿವಾರಣೆಗೆ 8 ಜಿಲ್ಲೆಗಳಲ್ಲಿ ಅಶಾ ಕಿರಣ ಯೋಜನೆ ಆರಂಭಿಸಲಾಗಿದೆ. ಇದು ಅಂಧತ್ವ ಪ್ರಮಾಣವನ್ನು ಶೇ 0.25ರಷ್ಟು ಇಳಿಸುವ ಉದ್ದೇಶ ಹೊಂದಿದೆ.

ಅಂಗಾಗ ದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸುತ್ತಿದ್ದೇವೆ. ಈ ಮೂಲಕ ಅಮೂಲ್ಯ ಜೀವ ಉಳಿಸುವುದು ಸಾಧ್ಯವಾಗಲಿದೆ: ಗುಂಡೂರಾವ್