28-11-2023
ಗದಗ ಜಿಲ್ಲೆಯಲ್ಲಿ ಈರುಳ್ಳಿ ಕಳ್ಳರ ಹಾವಳಿಗೆ ಬೆಚ್ಚಿದ ರೈತರು
Author: ಗಣಪತಿ ಶರ್ಮ
ಈರುಳ್ಳಿಗೆ ಚಿನ್ನದ ಬೆಲೆ
ಈರುಳ್ಳಿಗೆ ಚಿನ್ನದ ಬೆಲೆ ಬಂದಿರುವುದರಿಂದ ರೈತರಿಗೆ ಖುಷಿಯ ಜತೆಗೇ ಸಂಕಷ್ಟವೂ ಎದುರಾಗಿದೆ.
ಹೆಚ್ಚಿದ ಕಳ್ಳತನ
ಗದಗ ಜಿಲ್ಲೆಯಲ್ಲಿ ಈರುಳ್ಳಿ ಕಳ್ಳತನ ಹೆಚ್ಚಾಗಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.
ಈರುಳ್ಳಿ ಉಳಿಸಲು ಸಾಹಸ
ಈರುಳ್ಳಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದಂತೆ ರೈತರು ಅಲರ್ಟ್ ಆಗಿದ್ದಾರೆ.
ಹಗಲು, ರಾತ್ರಿ ಕಾವಲು
ಮುಂಡರಗಿ ತಾಲೂಕಿನ ಡಂಬಳ ರೈತರು ಈರುಳ್ಳಿ ಉಳಿಸಿಕೊಳ್ಳಲು ಹಗಲು, ರಾತ್ರಿ ಜಮೀನು ಕಾಯುತ್ತಿದ್ದಾರೆ.
ಅವಧಿಗೂ ಮುನ್ನ ಕೊಯ್ಲು
ಕೆಲ ರೈತರು ಈರುಳ್ಳಿ ಕಾವಲು ಕಾದರೆ ಇನ್ನು ಕೆಲವರು ಅವಧಿಗೂ ಮುನ್ನ ಕಿತ್ತುಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ರೈತರಿಗಿಲ್ಲ ನೆಮ್ಮದಿ
ಭೀಕರ ಬರದಲ್ಲೂ ಉತ್ತಮ ಈರುಳ್ಳಿ ಬೆಳೆದ ರೈತರಿಗೆ ಕಳ್ಳರಿಂದಾಗಿ ನೆಮ್ಮದಿ ಇಲ್ಲದಂತಾಗಿದೆ.
ಕ್ಯಾರೇ ಅನ್ನದ ಪೊಲೀಸರು
ಈರುಳ್ಳಿ ಕಳ್ಳರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ರೈತರ ಅಸಮಾಧಾನ
ಬೆಳೆದ ಬೆಳೆಗೆ ದೂರಿತ್ತರೂ ರಕ್ಷಣೆ ನೀಡದ ಪೊಲೀಸರು ಹಾಗೂ ಆಡಳಿತದ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
NEXT - ಮತ್ತೆ ಮೈತ್ರಿ ಸರ್ಕಾರ ಬೇಕೆಂದು ಜನರ ನಿರೀಕ್ಷೆ: ಕುಮಾರಸ್ವಾಮಿ