27 Sep 2025

Author: Bhavana Hegde

ಮಡಿಕೇರಿಯಲ್ಲಿ ದಸರಾ ಪ್ರಯುಕ್ತ ಡಾಗ್ ಶೋ; ಇಲ್ಲಿದೆ ಫೋಟೋಸ್

ದಸರಾ ಉತ್ಸವದ ಮಧ್ಯೆ ಜಿಲ್ಲೆಯ ಶ್ವಾನ ಪ್ರಿಯರಿಗಾಗಿಯೇ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು. ದೇಶ ವಿದೇಶದ ತಳಿಗಳ ವಿಶಿಷ್ಟ ಶ್ವಾನಗಳನ್ನ ಕಂಡು ಜನರು ಪುಳಕಿತರಾದರು.

ಡಾಗ್ ಶೋ

ಮಡಿಕೇರಿ ನಗರದಲ್ಲಿ ಮೊದಲ ದಿನದ ಯುವ ದಸರಾ ಅಂಗವಾಗಿ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ಆಯೋಜಿಸಲಾಗಿತ್ತು.

ಶ್ವಾನ ಸ್ಪರ್ಧೆ

ತಮ್ಮ ಪ್ರೀತಿ ನಾಯಿಗಳನ್ನ ಹಿಡಿದುಕೊಂಡು ಬಾರಿ ಉತ್ಸಾಹದಿಂದಲೇ ನಾನಾ ಭಾಗಗಳಿಂದ ಜನ ಬಂದಿದ್ದರು.

ಸಾವಿರಾರು ಜನ ಭಾಗಿ

ರಾಟ್ವೀಲರ್, ಪಮೋರಿಯನ್, ಸೇರಿ 20ಕ್ಕೂ ಹೆಚ್ಚು ಶ್ವಾನಗಳು ತಮ್ಮ ಸೌಂದರ್ಯ ಚಾಕಚಕ್ಯತೆ ಪ್ರದರ್ಶಿಸಿದವು.

ವಿವಿಧ ಶ್ವಾನ ತಳಿಗಳು

ಶ್ವಾನಗಳ ವರ್ತನೆ, ದೇಹದ ಆಕಾರ, ನಡುಗೆ, ಸ್ವಭಾವದ ಆಧಾರದ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಶ್ವಾನಗಳು

ತಮ್ಮ ಮಾಲಿಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದ ನಾಯಿಗಳು ತಮ್ಮ ಬುದ್ಧಿವಂತಿಗೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದವು. 

ನಾಯಿಗಳ ಬುದ್ದಿವಂತಿಕೆ

ನೆಚ್ಚಿನ ಶ್ವಾನದ ಬ್ರೀಡ್ಗಳು ಮಾಲೀಕರು ಹೇಳಿದಂತೆ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸುವುದನ್ನು ವೀಕ್ಷಕರು ಕಣ್ತುಂಬಿಕೊಂಡರು.

ನೆಚ್ಚಿನ ಬ್ರೀಡ್ಗಳು

ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಶ್ವಾನ ಪ್ರದರ್ಶನದಲ್ಲಿ 60ಕ್ಕೂ ಅಧಿಕ ಶ್ವಾನಗಳು ಪಾಲ್ಗೊಂಡಿದ್ದವು.

60 ಕ್ಕೂ ಹೆಚ್ಚು ನಾಯಿಗಳು

ಇನ್ನು ಸ್ಪರ್ಧೆಯಲ್ಲಿ ಗೆದ್ದ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು.

ಶ್ವಾನಗಳಿಗೆ ಬಹುಮಾನ