Pic Credit: pinterest
By Malashree anchan
22 September 2025
ನಿಮ್ಮ ಸಹದ್ಯೋಗಿಗಳೊಂದಿಗೆ ಮಾತನಾಡುವಾಗ ಸಕಾರಾತ್ಮಕವಾಗಿರಿ. ಇತರರ ಬಗ್ಗೆ ನಕಾರಾತ್ಮಕವಾಗಿ ಮಾತಾಡಬೇಡಿ. ಇದರಿಂದ ಸಮಸ್ಯೆಗಳು ಉದ್ಭವಿಸಬಹುದು.
ಸಹದ್ಯೋಗಿಗಳಿಗೆ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಹೇಳಬೇಡಿ. ಏಕೆಂದರೆ ನಿಮ್ಮ ಬಳಿ ಹೆಚ್ಚು ಹಣವಿದ್ದರೆ ಅವರು ಅಸೂಯೆ ಪಡ್ತಾರೆ. ಕಮ್ಮಿ ಹಣ ಇದ್ರೆ ನಿಮ್ಮನ್ನು ಕೀಳಾಗಿ ಕಾಣುತ್ತಾರೆ.
ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ನಿಮ್ಮ ಕೆಲಸದಲ್ಲಿ ನೀವು ತೃಪ್ತರಾಗಿದ್ದರೆ ಅಥವಾ ಅತೃಪ್ತಿ ಹೊಂದಿದ್ದರೆ ನಿಮ್ಮ ಸಹದ್ಯೋಗಿಗಳಿಗೆ ಅದರ ಬಗ್ಗೆ ಹೇಳಬೇಡಿ. ಇದರಿಂದ ಸಮಸ್ಯೆಗಳು ಉಂಟಾಗಬಹುದು.
ಪ್ರೀತಿ, ಮದುವೆಯಂತಹ ವೈಯಕ್ತಿಕ ವಿಷಯಗಳನ್ನು ನಿಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದಲ್ಲ.
ನಿಮ್ಮ ವ್ಯವಸ್ಥಾಪರಕರು ನಿಮಗೆ ನೀಡುವ ಗೌಪ್ಯ ಯೋಜನೆಯ ವಿವರಗಳನ್ನು ನಿಮ್ಮ ಸಹದ್ಯೋಗಿಗಳ ಜೊತೆ ಹೇಳಿಕೊಳ್ಳಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾಗಬಹುದು.
ನಿಮ್ಮ ಸಹದ್ಯೋಗಿಗಳೊಂದಿಗೆ ನಿಮ್ಮ ಸಂಬಳ ಮತ್ತು ಬಡ್ತಿಯ ವಿಚಾರಗಳ ಬಗ್ಗೆ ಮಾತನಾಡಬೇಡಿ. ಇದು ಅವರಲ್ಲಿ ಅಸೂಯೆಯ ಭಾವನೆಯನ್ನು ಮೂಡಿಸುತ್ತದೆ.
ನಿಮ್ಮ ಸಹದ್ಯೋಗಿಗಳೊಂದಿಗೆ ನಿಮ್ಮ ಸಂಬಳ ಮತ್ತು ಬಡ್ತಿಯ ವಿಚಾರಗಳ ಬಗ್ಗೆ ಮಾತನಾಡಬೇಡಿ. ಇದು ಅವರಲ್ಲಿ ಅಸೂಯೆಯ ಭಾವನೆಯನ್ನು ಮೂಡಿಸುತ್ತದೆ.