Pic Credit: pinterest
By Preeti Bhat
15 May 2025
ರಾತ್ರಿ ಸಮಯದಲ್ಲಿ ಒಳ್ಳೆ ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಇದು ದಿನಪೂರ್ತಿ ನಾವು ಚೈತನ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದೆಯೇ ನಿದ್ರಾಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೃದ್ರೋಗ, ಬೊಜ್ಜು, ಮಧುಮೇಹ, ಮೂತ್ರಪಿಂಡದ ಕಾಯಿಲೆಗಳನ್ನು ತಪ್ಪಿಸಬೇಕು ಎಂದರೆ, ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದು ಅತ್ಯಗತ್ಯ.
ಅತಿಯಾಗಿ ಟಿವಿ, ಮೊಬೈಲ್ ಅಥವಾ ಲ್ಯಾಪ್‌ಟಾಪ್ ನೋಡುವುದು ಸರಿಯಾಗಿ ನಿದ್ರೆ ಬರದಿರಲು ಪ್ರಮುಖ ಕಾರಣವಾಗಿದೆ.
ತಡರಾತ್ರಿಯ ವರೆಗೆ ಮೊಬೈಲ್ ಬಳಸುವುದು ಅಥವಾ ಲ್ಯಾಪ್‌ಟಾಪ್ ಗಳಲ್ಲಿ ಕೆಲಸ ಮಾಡುವುದು ಚೆನ್ನಾಗಿ ನಿದ್ರೆ ಮಾಡುವುದಕ್ಕೆ ಅಡ್ಡಿಯಾಗುತ್ತದೆ.
ಮಲಗುವ ಮೊದಲು ನೀರು ಅಥವಾ ಇನ್ನಿತರ ದ್ರವ ಪದಾರ್ಥಗಳ ಸೇವನೆ ಮಾಡುವುದು ಸಹ ನಿದ್ರೆಗೆ ಅಡ್ಡಿಯಾಗುತ್ತದೆ.
ರಾತ್ರಿ ಸಮಯದಲ್ಲಿ ಹೆಚ್ಚಿನ ಆಹಾರ ಸೇವನೆ ಕೂಡ ಒಳ್ಳೆಯ ನಿದ್ರೆಗೆ ಅಡ್ಡಿಯಾಗುತ್ತದೆ.
ದೇಹದಲ್ಲಿ ವಿಟಮಿನ್ ಡಿ ಕೊರತೆ ಮತ್ತು ಪ್ರತಿನಿತ್ಯವೂ ಒಂದೇ ಸಮಯಕ್ಕೆ ಮಲಗದಿರುವುದು ಸಹ ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ.