Pic Credit: gettyimages
By Sai Nanda
28 April 2025
ಸಿಹಿ ಸಿಹಿಯಿರುವ ಕಾರಣ ಎಲ್ಲರೂ ಇಷ್ಟ ಪಟ್ಟು ಈ ಖರ್ಜೂರವನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ.
ಈ ಖರ್ಜೂರದಲ್ಲಿ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6, ಕಬ್ಬಿಣ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಒಂದು ಲೋಟ ಬಿಸಿ ಹಾಲಿಗೆ ಖರ್ಜೂರ ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಬೆಳಗ್ಗೆ ಹಾಗೂ ರಾತ್ರಿ ಹಾಗೆಯೇ ತಿನ್ನುವುದಕ್ಕಿಂತ ಒಂದು ಲೋಟ ಬಿಸಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ.
ಖರ್ಜೂರ ಮಿಶ್ರಿತ ಹಾಲಿನ ಸೇವನೆಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಸಮಸ್ಯೆ ಬರದಂತೆ ತಡೆಯಲು ಸಹಕಾರಿಯಾಗಿದೆ.
ಈ ಖರ್ಜೂರದಲ್ಲಿ ಫೈಬರ್ ಹೇರಳವಾಗಿದ್ದು, ಇದು ಮಲಬದ್ಧತೆಯನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಬಿಸಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಸುಧಾರಿಸಿ, ಹೊಟ್ಟೆ ಉಬ್ಬರ, ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಬಿಸಿ ಬಿಸಿ ಹಾಲಿಗೆ ಖರ್ಜೂರ ಬೆರೆಸಿ ಸೇವಿಸುವುದು ಮೂಳೆಗಳ ಆರೋಗ್ಯ ಸುಧಾರಿಸಲು ಸಹಾಯಕವಾಗಿದೆ.