ಅಂಗೈನಲ್ಲಿ ತುರಿಕೆಯಾಗುವುದು ಈ ರೋಗ ಬರುವ ಮುನ್ಸೂಚನೆ
Tv9 Kannada Logo

ಅಂಗೈನಲ್ಲಿ ತುರಿಕೆಯಾಗುವುದು ಈ ರೋಗ ಬರುವ ಮುನ್ಸೂಚನೆ

Pic Credit: gettyimages

By Preeti Bhatt

24 April 2025

ಅಂಗೈಗಳಲ್ಲಿ ತುರಿಕೆ

ಅಂಗೈಗಳಲ್ಲಿ ತುರಿಕೆ ಕಂಡು ಬಂದರೆ ಹಣ ಬರುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ಎಷ್ಟು ನಿಜ ಎಂಬುದು ಯಾರಿಗೂ ತಿಳಿದಿಲ್ಲ.  ಇದೊಂದು ನಂಬಿಕೆ ಅಷ್ಟೇ.

ಆರೋಗ್ಯ ಸಮಸ್ಯೆ

ವಾಸ್ತವದಲ್ಲಿ ಈ ತುರಿಕೆ ಕಂಡು ಬರುವುದರ ಹಿಂದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಇರಬಹುದು ಎಂದು ತಜ್ಞರು ಹೇಳುತ್ತಾರೆ.

ಕೈ ತೊಳೆಯವ ಅಭ್ಯಾಸ

ಪದೇ ಪದೇ ಕೈ ತೊಳೆಯವ ಅಭ್ಯಾಸ ಕೂಡ ತುರಿಕೆಗೆ ಕಾರಣವಾಗಬಹುದು. ಈ ರೀತಿಯಾದಾಗ ಕ್ರೀಮ್ ಅಥವಾ ಮಾಯಿಶ್ಚರೈಸರ್ ಬಳಸಿ.

ಮಧುಮೇಹ

ಅಂಗೈಗಳ ತುರಿಕೆಗೆ ಮಧುಮೇಹವೂ ಕಾರಣವಾಗಿರಬಹುದು. ಸೆಳೆತ, ಕಿರಿಕಿರಿ ಅಥವಾ ತುರಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಚರ್ಮದ ಅಲರ್ಜಿ

ಅಂಗೈಗಳಲ್ಲಿ ತುರಿಕೆ ಕಂಡು ಬರಲು ಮತ್ತೊಂದು ಕಾರಣವೆಂದರೆ ಚರ್ಮದ ಅಲರ್ಜಿ. ಹೊಸ ಉತ್ಪನ್ನವನ್ನು ಬಳಸುವ ಮುನ್ನ ಎಚ್ಚರ ವಹಿಸಿ.   

ರಾಸಾಯನಿಕಗಳು

ಪ್ರತಿನಿತ್ಯ ಬಳಕೆ ಮಾಡುವ ಬಾಡಿ ವಾಶ್, ಡಿಟರ್ಜೆಂಟ್, ಹ್ಯಾಂಡ್ ಸೋಪ್, ಸ್ಯಾನಿಟೈಸರ್ ಇತ್ಯಾದಿಗಳಲ್ಲಿರುವ ರಾಸಾಯನಿಕಗಳು ಚರ್ಮದ ಅಲರ್ಜಿಯನ್ನುಂಟು ಮಾಡುತ್ತವೆ.

ರಾಸಾಯನಿಕಗಳು

ಪ್ರತಿನಿತ್ಯ ಬಳಕೆ ಮಾಡುವ ಬಾಡಿ ವಾಶ್, ಡಿಟರ್ಜೆಂಟ್, ಹ್ಯಾಂಡ್ ಸೋಪ್, ಸ್ಯಾನಿಟೈಸರ್ ಇತ್ಯಾದಿಗಳಲ್ಲಿರುವ ರಾಸಾಯನಿಕಗಳು ಚರ್ಮದ ಅಲರ್ಜಿಯನ್ನುಂಟು ಮಾಡುತ್ತವೆ.

ವೈದ್ಯರ ಸಲಹೆ

ಕೆಲವು ಔಷಧಿಗಳು ಕೂಡ  ಚರ್ಮದ ಮೇಲೆ ಪರಿಣಾಮ ಬೀರಬಹುದು. ಈ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಬಹಳ ಅವಶ್ಯಕ.

ಇತರ ಭಾಗಗಳಲ್ಲಿ ತುರಿಕೆ

ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ, ಅದು ಚರ್ಮದ ಮೇಲೂ ಪರಿಣಾಮ ಬೀರಬಹುದು. ಜೊತೆಗೆ ದೇಹದ ಇತರ ಭಾಗಗಳಲ್ಲಿ ತುರಿಕೆಗೆ ಕಾರಣವಾಗಬಹುದು.