Pic Credit: pinterest
By Malashree Anchan
11 April 2025
ಹೆಚ್ಚಿನ ಹೆಣ್ಣು ಮಕ್ಕಳು ತಮ್ಮ ತ್ವಚೆಯ ಆರೈಕೆಗಾಗಿ ಮೆಡಿಮಿಕ್ಸ್ ಸೋಪ್ ಬಳಕೆ ಮಾಡ್ತಾರೆ. ಆದ್ರೆ ನಿಮ್ಗೊತ್ತಾ ಈ ಸೋಪನ್ನು ಯಾರಿಗಾಗಿ ತಯಾರಿಸಿದ್ದು ಎಂಬ ವಿಚಾರ.
ಮೆಡಿಮಿಕ್ಸ್ ಸೋಪನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಮೊದಲು ತಯಾರು ಮಾಡಲಾಗಿತ್ತು.
ರೈಲ್ವೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು ರೈಲ್ವೆ ಕಾರ್ಮಿಕರಿಗಾಗಿ ಈ ಸೋಪ್ ತಯಾರಿಸಿದರು.
ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಈ ಸೋಪ್ ಗಳನ್ನು ತಯಾರು ಮಾಡಿದರು.
ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಈ ಸೋಪ್ ತಯಾರು ಮಾಡಿದರು.
ಈ ಸೋಪ್ ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತ್ವಚೆಗೆ ಪರಿಮಳ ನೀಡುತ್ತಿತ್ತು.
ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು ಎಂದು ಹೇಳಲಾಗುತ್ತದೆ.
ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ.
ಇಂದು ಇದೇ ಕಂಪೆನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದು, ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಿದ್ದಾರೆ.