Pic Credit: gettyimages
By Preeti Bhatt
23 April 2025
ಗರ್ಭವಾಸ್ಥೆಯಲ್ಲಿ ಮಹಿಳೆಯರ ದೇಹ ಬಹಳ ನಾಜೂಕಾಗಿರುತ್ತದೆ ಹಾಗಾಗಿ ಬೇಗ ಜ್ವರ, ಶೀತ ಸೇರಿದಂತೆ ಸಣ್ಣ ಸಣ್ಣ ರೋಗಗಳು ಪದೇ ಪದೇ ಕಾಡುತ್ತದೆ.
ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ವೇಗವಾಗಿ ಗುಣಮುಖರಾಗಲು ಪ್ಯಾರಾಸಿಟಮಾಲ್ ಗಳನ್ನು ಸೇವನೆ ಮಾಡುತ್ತಾರೆ.
ಆದರೆ ಅಧ್ಯಯನವೊಂದರಲ್ಲಿ ಪ್ಯಾರಾಸಿಟಮಾಲ್ ಗರ್ಭಿಣಿಯರಿಗೆ ಒಳ್ಳೆಯದಲ್ಲ, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಮಗುವಿನ ಆರೋಗ್ಯ ಹಾಳುಮಾಡುತ್ತದೆ ಎಂದಿದೆ.
ಪ್ಯಾರಾಸಿಟಮಾಲ್ ಗಳನ್ನು ಹೆಚ್ಚು ಬಳಕೆ ಮಾಡುವ ಗರ್ಭಿಣಿಯರ ಮೇಲೆ ಅಧ್ಯಯನ ನಡೆಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯರಿಗೆ ಮಾತ್ರವಲ್ಲ ಇದರಿಂದ ಶಿಶುಗಳಲ್ಲಿ ಎಡಿಎಚ್ಡಿ ಉಲ್ಬಣವಾಗುವ ಅಪಾಯ ಹೆಚ್ಚಾಗಬಹುದು ಎಂದು ಹೇಳಿದೆ.
ಎಡಿಎಚ್ಡಿ ಅಂದರೆ ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ, ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಿಚಿತ್ರ ಕಾಯಿಲೆಯಾಗಿದೆ.
ಅಲ್ಲದೆ ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಹೆಚ್ಚು ಬಳಕೆ ಮಾಡುವುದರಿಂದ ಹುಟ್ಟುವ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರಬಹುದು.
ಈ ಟ್ಯಾಬ್ಲೆಟ್ ಅತಿಯಾದ ಸೇವನೆಯು, ಮುಂದೆ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡಬಹುದು.
ಹಾಗಾಗಿ ವೈದ್ಯರ ಸಲಹೆಯ ಅನುಸಾರ ಔಷಧಿಗಳ ಸೇವನೆ ಮಾಡಬೇಕು, ಅದರ ಹೊರತಾಗಿ ಯಾವುದೇ ಟ್ಯಾಬ್ಲೆಟ್ ಗಳ ಸೇವನೆ ಮಾಡಬಾರದು.