Pic Credit: pinterest
By Malashree Anchan
16 May 2025
ಸಂಬಂಧ ಮುರಿದು ಬಿದ್ದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ ಅಲ್ವಾ. ಮಾತ್ರವಲ್ಲದೆ ಇದರಿಂದ ಹಲವು ಪ್ರಯೋಜನಗಳು ಕೂಡ ಇವೆಯಂತೆ.
ಬ್ರೇಕಪ್‌ನಿಂದ ನೀವು ಹಲವು ಪಾಠ, ಅನುಭವಗಳನ್ನು ಕಲಿಯುತ್ತೀರಿ. ಈ ಅನುಭವಗಳು ನಿಮ್ಮನ್ನು ಮೊದಲಿಗಿಂತ ಹೆಚ್ಚು ಜವಾಬ್ದಾರಿಯುತವಾಗಿಸುತ್ತದೆ.
ಬಿಟ್ಟು ಹೋದವರ ಮುಂದೆ ತಲೆ ಎತ್ತಿ ನಿಲ್ಲುತ್ತೇನೆ ಎಂಬ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಬ್ರೇಕಪ್‌ನಿಂದ ಮುಕ್ತವಾಗಿ ಹಾಗೂ ಯಾರ ಹಂಗಿಲ್ಲದೆ ಬದುಕುವ ಕಲೆಯನ್ನು ನೀವು ಕಲಿಯುತ್ತೀರಿ.
ಬ್ರೇಕಪ್ ಬಳಿಕ ನೀವು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಹೆಚ್ಚು ಹಾಗೂ ಸುಂದರ ಕ್ಷಣವನ್ನು ಕಳೆಯಬಹುದು.
ಎಲ್ಲಿ ಬೇಕಾದ್ರೂ ಹೋಗಬಹುದು, ಯಾವ ಬಟ್ಟೆಯನ್ನು ಬೇಕಾದರೂ ಧರಿಸಬಹುದು, ಹೀಗೆ ನಿಮ್ಮಿಚ್ಛೆಯಂತೆ ನೀವು ಜೀವಿಸಬಹುದು.
ತಡ ರಾತ್ರಿಯವರೆಗೆ ಮೆಸೇಜ್, ಕಾಲ್ ಮಾಡುತ್ತಾ ನಿಮ್ಮ ನಿದ್ದೆಯನ್ನು ವೇಸ್ಟ್ ಮಾಡಬೇಕೆಂದಿಲ್ಲ.
ಒಟ್ಟಾರೆಯಾಗಿ ಬ್ರೇಕಪ್ ನೋವಿನಿಂದ ಕೂಡಿದ್ದರೂ ಇದು ಜೀವನದಲ್ಲಿ ಆತ್ಮವಿಶ್ವಾಸ, ಬದುಕುವ ಛಲವನ್ನು ಹೆಚ್ಚಿಸುವುದು ಸುಳ್ಳಲ್ಲ.