Pic Credit: pinterest
By Preeti Bhat
09 May 2025
ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಂದು ಕಲೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಅದರಲ್ಲಿಯೂ ಮನೆ ಕೆಲಸ ಮಾಡುವುದನ್ನು ನಿರ್ಲಕ್ಷಿಸಬಾರದು.
ಅದರಲ್ಲಿಯೂ ಮಲಗುವ ಕೋಣೆಯಲ್ಲಿ ಬಳಸುವ ಬೆಡ್‌ಶೀಟ್ ಗಳನ್ನು ತಿಂಗಳುಗಟ್ಟಲೆ ಬದಲಾಯಿಸದೆ ಬಳಸುವ ಅನೇಕರಿದ್ದಾರೆ.
ಆದರೆ ಈ ರೀತಿಯ ಅಭ್ಯಾಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದರಿಂದ ತೊಂದರೆಗಳು ಸಾಕಷ್ಟಿದೆ.
ಆದರೆ ಈ ರೀತಿಯ ಅಭ್ಯಾಸ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದರಿಂದ ತೊಂದರೆಗಳು ಸಾಕಷ್ಟಿದೆ.
ಕೊಳಕು ಬೆಡ್ ಶೀಟ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ.
ಹಾಗಾಗಿ ಬೆಡ್ ಶೀಟ್‌ಗಳನ್ನು ವಾರಕ್ಕೆ ಒಮ್ಮೆಯಾದರೂ ತೊಳೆಯಬೇಕು ಇಲ್ಲವಾದಲ್ಲಿ ಇದು ಮೊಡವೆಗಳು, ಅಲರ್ಜಿ ಅಥವಾ ಸೋಂಕುಗಳಿಗೆ ಕಾರಣವಾಗಬಹುದು.
ಮಲಗುವ ಕೋಣೆಯ ಬೆಡ್ ಶೀಟ್‌ಗಳು ಕೊಳಕಾಗಿದ್ದರೆ ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಅಲರ್ಜಿ ಇದ್ದರೆ, ಬೆಡ್ ಶೀಟ್‌ಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಇಲ್ಲವಾದಲ್ಲಿ ಇದು ನಿಮ್ಮ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.