ಚಾಣಕ್ಯ ಹೇಳ್ತಾರೆ ಇಂತಹ ಮಹಿಳೆಯನ್ನು ಮದುವೆಯಾಗಬಾರದೆಂದು

Pic Credit: pinterest

By Malashree Anchan

14 May 2025

ಈ ಮಹಿಳೆಯನ್ನು ಮದುವೆಯಾಗಬಾರದು

ವೃತ್ತಿ ಜೀವನ, ಸ್ನೇಹ ಸಂಬಂಧದಂತೆ ಎಂತಹವರನ್ನು ಮದುವೆಯಾಗಬಾರದು ಎಂಬುದನ್ನು ಸಹ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ.

ಕೆಟ್ಟ ಕುಟುಂಬ

ಆಚಾರ್ಯ ಚಾಣಕ್ಯರ ಪ್ರಕಾರ, ಗಂಡಸರು ಎಂದಿಗೂ ಕೆಟ್ಟ ಕುಟುಂಬಕ್ಕೆ ಸೇರಿದ ಮಹಿಳೆಯನ್ನು ಮದುವೆಯಾಗಬಾರದಂತೆ.

ಗೌರವ ನೀಡದವಳು

ಯಾವ ಮಹಿಳೆ ಕುಟುಂಬ, ಕುಟುಂಬ ಸದಸ್ಯರಿಗೆ ಗೌರವವನ್ನು ನೀಡುವುದಿಲ್ಲವೋ ಅಂತಹ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದೆಂದು ಚಾಣಕ್ಯ ಹೇಳುತ್ತಾರೆ.

ನಡವಳಿಕೆ

ಒಬ್ಬ ಮಹಿಳೆ ನೋಡಲು ತುಂಬಾ ಸುಂದರವಾಗಿದ್ದರೂ, ಆಕೆಯ ವರ್ತನೆ, ನಡವಳಿಕೆ ಚೆನ್ನಾಗಿಲ್ಲದಿದ್ದರೆ, ಅಂತಹ ಮಹಿಳೆಯನ್ನು ಮದುವೆಯಾಗಬಾರದು.

ಸುಳ್ಳು 

ಸುಳ್ಳು ಹೇಳುವುದರಲ್ಲಿ ನಿಪುಣಳಾದ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಚುಚ್ಚು ಮಾತು

ಚಾಣಕ್ಯರ ಪ್ರಕಾರ, ಯಾವ ಮಹಿಳೆ ಯಾವಾಗಲೂ ಕಠಿಣ, ಚುಚ್ಚು ಮಾತುಗಳನ್ನಾಡುತ್ತಾಳೋ ಅಂತಹ ಮಹಿಳೆಯನ್ನು ಮದುವೆಯಾಗಬಾರದು.

ಅಹಂಕಾರ

ಆಂತರಿಕ ಸೌಂದರ್ಯವನ್ನು ಹೊಂದಿರದ  ಹಾಗೂ ಅಹಂಕಾರ ಹೊಂದಿರುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು.

ದೇವರಲ್ಲಿ ನಂಬಿಕೆ

ದೇವರಲ್ಲಿ ನಂಬಿಕೆ ಮತ್ತು ಧರ್ಮ ನಿಷ್ಠೆಯನ್ನು ಹೊಂದಿರದ ಮಹಿಳೆಯನ್ನು ಮದುವೆಯಾಗಬಾರದು ಎಂದು ಚಾಣಕ್ಯರು ಹೇಳುತ್ತಾರೆ.