Pic Credit: pinterest
By Preeti Bhat
15 May 2025
ಮಲ್ಲಿಗೆ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ. ಗುಲಾಬಿ ಬಿಟ್ಟರೆ ಮಲ್ಲಿಗೆಯನ್ನೇ ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಾರೆ.
ಮಲ್ಲಿಗೆ ಹೂ ಹೆಣ್ಣು ಮಕ್ಕಳ ಶೃಂಗಾರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ನೋಡುವುದಕ್ಕೆ ಚಿಕ್ಕ ಹೂವಾಗಿದ್ದರೂ ಕೂಡ ಇದರಿಂದ ಸಿಗುವ ಪ್ರಯೋಜನ ಮಾತ್ರ ನಮ್ಮ ಊಹೆಗೂ ನಿಲುಕದಷ್ಟು ಇರುತ್ತದೆ.
ಮದುವೆ ಮೊದಲ ರಾತ್ರಿಯಲ್ಲಿಯೂ ಹೆಣ್ಣು- ಗಂಡಿನ ಕೋಣೆಯಲ್ಲಿ ಭರಪೂರವಾಗಿ ಮಲ್ಲಿಗೆ ಹೂವುಗಳಿಂದ ಅಲಂಕಾರ ಮಾಡಿರುತ್ತಾರೆ.
ಈ ಮಲ್ಲಿಗೆ ಹೂವು, ಗಂಡ ಹೆಂಡತಿಯ ನಡುವಿನ ಭಾಂದವ್ಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಮಲ್ಲಿಗೆಯ ಪರಿಮಳ ಮನಸ್ಸನ್ನು ಶಾಂತವಾಗಿರಿಸುತ್ತದೆ.
ಮಲ್ಲಿಗೆಯನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಅದರ ಸುವಾಸನೆ ಸುತ್ತಲೂ ಹರಡಿ ಆಯಾಸವಾದ ದೇಹವನ್ನು ಉಲ್ಲಾಸಗೊಳ್ಳುವಂತೆ ಮಾಡುತ್ತದೆ.
ಈ ಪರಿಮಳವನ್ನು ಪದೇ ಪದೇ ತೆಗೆದುಕೊಳ್ಳುವುದರಿಂದ ಸಂತೋಷದ ಭಾವನೆ ಹೆಚ್ಚಾಗುತ್ತದೆ. ಇದು ಗಂಡ- ಹೆಂಡತಿ ಇಬ್ಬರಿಗೂ ಪ್ರಯೋಜನಕಾರಿ.
ಪ್ರತಿನಿತ್ಯವೂ ಮಲ್ಲಿಗೆ ಹೂವನ್ನು ಮುಡಿಯುವುದರಿಂದ ದೇಹ ತಂಪಾಗಿರುತ್ತದೆ. ಈ ಹೂವುಗಳು ನೆತ್ತಿಯ ಶಾಖವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.