ಬೆಂಡೆಕಾಯಿ ಪಲ್ಯ ಮಾಡುವಾಗ ಈ ವಿಚಾರ ತಿಳಿದಿರಲಿ

Pic Credit: pinterest

By Sai Nanda

18 September  2025

ಬೆಂಡೆಕಾಯಿ

ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಇದು ಲೋಳೆ ಬಿಡುವುದರಿಂದ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ.

ರುಚಿಕರ ಖಾದ್ಯಗಳು

ಬೆಂಡೆಕಾಯಿಯಲ್ಲಿ ಪಲ್ಯ, ಸಾಂಬಾರು, ಗೊಜ್ಜು, ಫ್ರೈ ಹೀಗೆ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಪಲ್ಯ ಮಾಡುವ ವಿಧಾನ ಭಿನ್ನ

ಪ್ರತಿಯೊಬ್ಬರು ತಮ್ಮದೇ ಶೈಲಿಯಲ್ಲಿ ಬೆಂಡೆಕಾಯಿಯಿಂದ ವಿವಿಧ ಖಾಧ್ಯಗಳನ್ನು ಮಾಡುತ್ತಾರೆ. ಈರುಳ್ಳಿ, ಮೆಣಸಿನಕಾಯಿ ಹಾಗೂ ಮಸಾಲೆಯಲ್ಲಿ ಬೇಯಿಸಿಕೊಳ್ಳುತ್ತಾರೆ.

ಈ ಪದಾರ್ಥ ಸೇರಿಸಿ

ಬೆಂಡೆಕಾಯಿ  ಬೇಯಿಸುವಾಗ ಒಂದು ಚಮಚ ಮೊಸರು ಅಥವಾ ನಿಂಬೆ ರಸ ಸೇರಿಸಿ. ಇದು ಜಿಡ್ಡಿನಾಂಶ ತಪ್ಪಿಸಿ, ರುಚಿಯನ್ನು ಹೆಚ್ಚಿಸುತ್ತದೆ.

ಮುಚ್ಚಳ ಮುಚ್ಚಬೇಡಿ

ನೀವು ಬೆಂಡೆಕಾಯಿ ಬೇಯಿಸುವಾಗ ಹೆಚ್ಚಿನವರು ಬಾಣಲೆಯನ್ನು ಮುಚ್ಚಳದಿಂದ ಮುಚ್ಚುತ್ತಾರೆ. ಹೀಗೆ ಮಾಡಿದ್ರೆ ತೇವಾಂಶವು ಅದರ  ರುಚಿಯನ್ನು ಹಾಳು ಮಾಡುತ್ತದೆ.

ಉಪ್ಪು ಸೇರಿಸುವುದು

ಈ ಬೆಂಡೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡುವಾಗ ಉಪ್ಪು ಯಾವಾಗ ಸೇರಿಸಬೇಕು ಎನ್ನುವ ಗೊಂದಲ ಅನೇಕರಲ್ಲಿದೆ.

ಇದೇ ಉತ್ತಮ ಸಮಯ

ಬೆಂಡೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡುತ್ತಿದ್ದರೆ ಕೊನೆಯಲ್ಲಿ ಉಪ್ಪು ಸೇರಿಸಿಕೊಳ್ಳಿ.

ರುಚಿ ಹಾಳಾಗುತ್ತದೆ

ಮೊದಲಿಗೆ ಉಪ್ಪು ಸೇರಿಸಿದರೆ ಇದು ತೇವಾಂಶವನ್ನು ಹೆಚ್ಚಿಸುತ್ತದೆ. ಹೆಚ್ಚು ನೀರು ಬಿಡುಗಡೆ ಮಾಡಿ ಜಿಗುಟಾಗಿ ಇದರ ರುಚಿಯೇ ಹಾಳಾಗುತ್ತದೆ.