ಕರ್ನಾಟಕದಲ್ಲಿದೆ ಅತ್ಯುತ್ತಮ ಹನಿಮೂನ್‌ ತಾಣಗಳು

Pic Credit: gettyimages

By Malashree Anchan

16 April 2025

ಕೂರ್ಗ್‌

ವರ್ಷವಿಡೀ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುವ ಕೂರ್ಗ್‌ ಹನಿಮೂನ್‌ ಹೋಗಲು ಬೆಸ್ಟ್‌ ಪ್ಲೇಸ್‌ ಅಂತಾನೇ ಹೇಳಬಹುದು.

ಗೋಕರ್ಣ

ನೀವು ಬೀಚ್‌ಗಳನ್ನು ತುಂಬಾ ಇಷ್ಟಪಡುವವರಾಗಿದ್ದರೆ ಗೋಕರ್ಣಕ್ಕೆ ಹನಿಮೂನ್‌ ಹೋಗಬಹುದು.

ಚಿಕ್ಕಮಗಳೂರು

ಚಿಕ್ಕಮಗಳೂರು ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ತಾಣವಾಗಿದೆ. ಇದು ಸಂಗಾತಿಯೊಂದಿಗೆ ಹನಿಮೂನ್‌ ಹೋಗಲು ಬೆಸ್ಟ್‌ ತಾಣ ಅಂತಾನೇ ಹೇಳಬಹುದು

ದಾಂಡೇಲಿ

ಕರ್ನಾಟಕದಲ್ಲಿರುವ ಮತ್ತೊಂದು ಪರಿಪೂರ್ಣ ಹನಿಮೂನ್‌ ತಾಣವೆಂದರೆ ದಾಂಡೇಲಿ. ಇಲ್ಲಿ ಜಂಗಲ್‌ ರೆಸಾರ್ಟ್‌ಗಳು, ಬಜೆಟ್‌ಸ್ನೇಹಿ ರೆಸಾರ್ಟ್‌ಗಳೂ ಇವೆ.

ಕಬಿನಿ 

ನೀವು ವನ್ಯಜೀವಿ ಮತ್ತು ಪ್ರಕೃತಿ ಪ್ರಿಯರಾಗಿದ್ದರೆ, ಕಬಿನಿ ನಿಮಗೆ ಸೂಕ್ತವಾದ ಮಧುಚಂದ್ರದ ತಾಣವಾಗಿದೆ. ಇಲ್ಲಿ ನಿಮ್ಮ ಸಂಗಾತಿಯೊಂದಿದೆ  ಸ್ಮರಣೀಯವಾದ ಕ್ಷಣವನ್ನು ಕಳೆಯಬಹುದು.

ಆಗುಂಬೆ

ಮಂಜಿನಿಂದ ಆಮೃತವಾದ ಬೆಟ್ಟಗುಡ್ಡಗಳು, ಪ್ರಕೃತಿ ಸೌಂದರ್ಯದ ಮೂಲಕವೇ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಆಗುಂಬೆ ಹನಿಮೂನ್‌ ಹೋಗಲು ಬೆಸ್ಟ್‌ ಸ್ಥಳ.

ಮೈಸೂರು 

ಪ್ರವಾಸಿಗರ ನೆಚ್ಚಿನ ತಾಣವಾದ ಅರಮನೆ ನಗರಿ ಮೈಸೂರು ಮೈಸೂರು ಕೂಡ ಹನಿಮೂನ್‌ ಹೋಗಲು ಸೂಕ್ತವಾದ ಸ್ಥಳವಾಗಿದೆ.

ಹಂಪಿ

ಒಂದು ಕಾಲದಲ್ಲಿ ವಿಜಯನಗರ ರಾಜವಂಶದ ರಾಜಧಾನಿಯಾಗಿದ್ದ ಹಂಪಿ ಐತಿಹಾಸಿಕ ಸ್ಥಳವನ್ನು ಇಷ್ಟಪಡುವ ಜೋಡಿಗಳಿಗೆ ಹನಿಮೂನ್‌ ಹೋಗಲು ಸೂಕ್ತ ಸ್ಥಳವಾಗಿದೆ.

ಮಂಗಳೂರು

ಬೀಚ್‌ ಇಷ್ಟಪಡುವವರಾಗಿದ್ದರೆ ನೀವು ಗೋವಾಗೆ ಹೋಗುವ ಬದಲು ಮಂಗಳೂರಿಗೆ ಹನಿಮೂನ್‌ ಹೋಗಬಹುದು. ಇಲ್ಲಿ ಸಾಕಷ್ಟು ಬೀಚ್‌, ದೇವಾಲಯಗಳಿವೆ.