Pic Credit: gettyimages
By Malashree Anchan
21 April 2025
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಫೋನ್‌ಗೆ ವ್ಯಸನರಾಗಿದ್ದು, ದಿನದ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಾ ಕಳೆಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ.
ಆದರೆ ಈ ಕೆಲವು ಸಂದರ್ಭಗಳಲ್ಲಿ ನೀವು ಮೊಬೈಲ್ ಫೋನ್‌ನಿಂದ ಆದಷ್ಟು ದೂರವಿರುವುದೇ ಉತ್ತಮ.
ಆಹಾರ ಸೇವಿಸುವಾಗ ಮೊಬೈಲ್ ನೋಡಬೇಡಿ. ಇದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ ಇದು ಅನ್ನಕ್ಕೆ ಅಗೌರವ ತೋರಿದಂತೆ.
ಮಲಗುವ ಸಮಯದಲ್ಲಿ ಆದಷ್ಟು ಮೊಬೈಲ್‌ನಿಂದ ದೂರವಿರಿ. ಏಕೆಂದರೆ ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತಾ ಕೂರಬೇಡಿ ಏಕೆಂದರೆ ಇದು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಪೂಜೆ, ಪ್ರಾರ್ಥನೆಯ ಸಮಯದಲ್ಲಿ ಆದಷ್ಟು ಮೊಬೈಲ್‌ನಿಂದ ದೂರವಿರಬೇಕು. ಇಲ್ಲದಿದ್ದರೆ ಭಕ್ತಿ ಮತ್ತು ಏಕಾಗ್ರತೆಯ ಕಡೆಗೆ ಗಮನ ಹರಿಸಲು ಆಗಲ್ಲ.
ದೇವಾಲಯಗಳಿಗೆ ಹೋದಾಗ ಅಥವಾ ಕಥೆ, ಸತ್ಸಂಗ ಕೇಳುವ ಸಮಯದಲ್ಲೂ ಮೊಬೈಲ್ ಬಳಸಬಾರದು.
ದೇವಾಲಯಗಳಿಗೆ ಹೋದಾಗ ಅಥವಾ ಕಥೆ, ಸತ್ಸಂಗ ಕೇಳುವ ಸಮಯದಲ್ಲೂ ಮೊಬೈಲ್ ಬಳಸಬಾರದು.
ಮೊಬೈಲ್ ನೋಡುತ್ತಾ ಶೌಚಾಲಯದಲ್ಲಿ ಗಂಟೆಗಟ್ಟಲೆ ಕೂರಬೇಡಿ. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.