Pic Credit: gettyimages
By Malashree Anchan
17 April 2025
ಯಾವುದೇ ಮಾಹಿತಿ, ಸಂಗತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮಾತನಾಡಲು ಹೋಗಬೇಡಿ. ಇಂತಹ ಸಂದರ್ಭಗಳಲ್ಲಿ ಮೌನವಾಗಿರಬೇಕು.
ಕೋಪಗೊಂಡಾಗ ರೇಗಾಡಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೋಪಗೊಂಡಾಗ ಭಾವನೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮೌನವಾಗಿರಿ.
ನಿಮ್ಮ ಒಂದು ಮಾತು ಸಂಬಂಧಕ್ಕೆ, ನಂಬಿಕೆಗೆ ಧಕ್ಕೆ ತರಬಹುದು ಎಂಬ ಭಾವನೆಯಿದ್ದರೆ, ಆ ಸಂದರ್ಭದಲ್ಲಿ ಮೌನವಾಗಿರಿ.
ಯಾರಾದರೂ ಅವರ ಕಷ್ಟಗಳನ್ನು, ಸಮಸ್ಯೆಗಳನ್ನು ನಿಮ್ಮ ಬಳಿ ಹಂಚಿಕೊಂಡಂತಹ ಸಂದರ್ಭದಲ್ಲಿ ಮೌನವಾಗಿರಿ.
ಜಗಳಗಳು ಉಲ್ಭಣಗೊಳ್ಳುತ್ತಿದೆ ಎಂಬ ಸಂದರ್ಭದಲ್ಲಿ ನೀವು ಮಾತಿಗೆ ಮಾತು ಬೆಳೆಸಿ ಜಗಳವಾಡುತ್ತಾ ಕೂರದೆ ಮೌನವಾಗಿರಬೇಕು.
ಹಿರಿಯರು ಮಾತನಾಡುವ ಸಂದರ್ಭದಲ್ಲಿ ಅವರ ಮಧ್ಯೆ ನೀವು ಮಾತನಾಡಲು ಹೋಗಬೇಡಿ, ಅವರ ಮಾತುಗಳನ್ನು ಶ್ರದ್ಧೆಯಿಂದ ಕೇಳಿ.
ಯಾರಾದರೂ ಟೀಕಿಸಿದಾಗ ಅವರಿಗೆ ಎದುರುತ್ತರ ಕೊಡಲು ಹೋಗದೆ ಮೌನವಾಗಿರಿ ಮತ್ತು ನಿಮ್ಮ ಸಾಧನೆಯ ಮೂಲಕವೇ ಅಂತಹವರಿಗೆ ಉತ್ತರ ಕೊಡಿ.
ಯಾರಾದರೂ ನಿಮ್ಮ ಬಳಿ ಇನ್ನೊಬ್ಬರ ಬಗ್ಗೆ ಕೆಟ್ದಾಗಿ ಮಾತನಾಡುವಾಗ ಅಥವಾ ಚಾಡಿ ಹೇಳುವಾಗ ಮೌನವಾಗಿರಬೇಕು.
ನಿಮ್ಮ ಮಾತು ಇತರರಿಗೆ ನೋವುಂಟು ಮಾಡುತ್ತೇ ಎಂದಾದರೆ ಸಂಬಂಧವನ್ನು ಉಳಿಸುವ ಸಲುವಾಗಿ ನೀವು ಮೌನವಾಗಿ ಇರಬೇಕು.