Pic credit - Instagram

Author: Rajesh Duggumane

‘ಮಿಲನ’ ನಟಿ ಪಾರ್ವತಿ ಕನ್ನಡಕ್ಕೆ ಮರಳೋದು ಯಾವಾಗ?

13 July 2026

ಅದ್ಭುತ ನಟಿ

ಪಾರ್ವತಿ ಮೆನನ್ (ತಿರುವೋತ್ತು) ಭಾರತೀಯ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಜನಪ್ರಿಯ ನಟಿಯಾಗಿದ್ದಾರೆ. 

ಮಿಲನಾ ಅಂಜಲಿ

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ 'ಮಿಲನಾ' ಚಿತ್ರದ ಅಂಜಲಿ ಪಾತ್ರ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ.  

ಸ್ಯಾಂಡಲ್‌ವುಡ್ ನೆನಪು

'ಪೃಥ್ವಿ'  ಮೊದಲಾದ  ಸಿನಿಮಾಗಳ ಮೂಲಕ ಕನ್ನಡದಲ್ಲಿ ಅವರು ಸಖತ್ ಕಮಾಲ್ ಮಾಡಿದ್ದರು

ರಾಷ್ಟ್ರ ಪ್ರಶಸ್ತಿ

ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸವಾಲಿನ ಪಾತ್ರಗಳನ್ನು ಪೋಷಿಸಿ ಇವರು ರಾಷ್ಟ್ರ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 

ಬದ್ಧತೆಯ ನಟನೆ

ಚಿತ್ರರಂಗದಲ್ಲಿ ಮಹಿಳಾ ಹಕ್ಕುಗಳ ಪರ ಧ್ವನಿ ಎತ್ತುತ್ತಾ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಅಪರೂಪದ ನಟಿಯಾಗಿ ಗುರುತಿಸಿಕೊಂಡಿದ್ದಾರೆ.  

ಕನ್ನಡಕ್ಕೆ ಬರಲಿ

ಅವರು ಸ್ಯಾಂಡಲ್‌ವುಡ್‌ನಿಂದ ದೂರವಾಗಿ ಹಲವು ವರ್ಷಗಳಾಗಿದ್ದು, ಮತ್ತೊಮ್ಮೆ ನೇರವಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿ ಎಂಬುದು ಎಲ್ಲರ ಆಶಯವಾಗಿದೆ.

ಫ್ಯಾನ್ಸ್ ಕೋರಿಕೆ

ಪಾರ್ವತಿ ಮೆನನ್ ಅವರು ಆದಷ್ಟು ಬೇಗ ಕನ್ನಡ ಚಿತ್ರರಂಗಕ್ಕೆ ಮರಳಿ ಬರಲಿ ಎಂಬುದು ಅವರ ಕನ್ನಡಿಗ ಅಭಿಮಾನಿಗಳ ದೊಡ್ಡ ಕೋರಿಕೆಯಾಗಿದೆ.