Pic credit - Instagram

Author: Rajesh Duggumane

ಸಂಕಷ್ಟಕ್ಕೆ ಸಿಲುಕಿದ ನಟಿ ಕಂಗನಾ ರಣಾವತ್ 

11 Nov 2026

ಎಫ್‌ಐಆರ್ ದಾಖಲು

ಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದ ಮೇಲೆ ಸಂಸದೆ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವಿವಾದಾತ್ಮಕ ಪೋಸ್ಟ್

ನವೆಂಬರ್ 10ರಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಸದ್ಯ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಸಾವಿನ ಉಲ್ಲೇಖ

ಇಂದಿರಾ, ಸಂಜಯ್ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಬಗ್ಗೆ ಪೋಸ್ಟ್‌ನಲ್ಲಿ ಪ್ರಚೋದನಕಾರಿ ಉಲ್ಲೇಖಗಳಿವೆ ಎಂದು ದೂರಲಾಗಿದೆ.

ಪರೋಕ್ಷ ಆರೋಪ

ಗಾಂಧಿ ಕುಟುಂಬದವರ ಹತ್ಯೆಯ ನಂತರ ಸೋನಿಯಾ ಗಾಂಧಿ ಅಧಿಕಾರದ ಉತ್ತರಾಧಿಕಾರಿಯಾದರು ಎಂದು ಕಂಗನಾ ಪರೋಕ್ಷವಾಗಿ ಆರೋಪಿಸಿದ್ದಾರೆ.

ಇಮೇಲ್ ದೂರು

ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ನವೆಂಬರ್ 12ರಂದು ಡಿಜಿಪಿಗೆ ಇಮೇಲ್ ಮೂಲಕ ದೂರು ಸಲ್ಲಿಸಿ ತನಿಖೆಗೆ ಕೋರಿದ್ದರು.

ಪೊಲೀಸ್ ತನಿಖೆ

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿ ಕೇಸ್ ದಾಖಲಾಗಿದ್ದು, ಶಿಮ್ಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪುಸ್ತಕ ಬಿಡುಗಡೆ

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆಯಾದ ದಿನವೇ ಕಂಗನಾ ಉದ್ದೇಶಪೂರ್ವಕವಾಗಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.