03 May 2025

Pic credit - Pintrest

Author: Akshatha Vorkady

ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರ ವಿಶೇಷತೆ ಏನು ಗೊತ್ತಾ? 

ಪೂರ್ವಾರ್ಧ ಮಕರ ಹಾಗೂ ಉತ್ತರಾರ್ಧ ಕುಂಭ ರಾಶಿಯಲ್ಲಿ ಇರುವ ನಕ್ಷತ್ರ ಧನಿಷ್ಠಾ. ನಗಾರಿಯ ಆಕಾರದಲ್ಲಿ ನಾಲ್ಕು ನಕ್ಷತ್ರಗಳು ಖಗೋಳದಲ್ಲಿ ಕಾಣಿಸುತ್ತವೆ.

ಧನಿಷ್ಠ ನಕ್ಷತ್ರ

Pic credit - Pintrest

ಧನಿಷ್ಠ ನಕ್ಷತ್ರದ ದೇವತೆ ದೇವಗಣದಲ್ಲಿ ಒಂದು ಭಾಗವಾದ ವಸು. ರಾಕ್ಷಸಗಣಕ್ಕೆ ಸೇರಿದ ನಕ್ಷತ್ರ ಇದಾಗಿದ್ದು, ಪಿತ್ತದೋಷವು ಪ್ರಧಾನವಾಗಿರುವುದು. ಗಾ ಗೀ ಗೂ ಗೇ ಇವು ನಕ್ಷತ್ರದ ಅಕ್ಷರಗಳಾಗಿವೆ.

ರಾಕ್ಷಸಗಣ

Pic credit - Pintrest

ಶ್ರವಿಷ್ಠಾ ಎನ್ನುವುದು ಪ್ರಾಚೀನ ಹೆಸರು. ವೇದಗಳಲ್ಲಿ ಶ್ರವಿಷ್ಠಾ ಎಂದೇ ಪ್ರಸಿದ್ಧ. ಈ ನಕ್ಷತ್ರದಲ್ಲಿ ಜನಿಸದವರು ಯಾವೆಲ್ಲ ಗುಣ  ಹೊಂದಿರುತ್ತಾರೆ. ಇವರ ವಿಶೇಷತೆಗಳೇನು ಎಂದು ಇಲ್ಲಿ ತಿಳಿದುಕೊಳ್ಳಿ. 

ಶ್ರವಿಷ್ಠಾ

Pic credit - Pintrest

ಧಾರ್ಮಿಕ‌‌ ಕ್ರಿಯೆಗಳ ಶ್ರದ್ಧೆ, ನಂಬಿಕೆ ಇರುವುದು. ಎಲ್ಲವನ್ನೂ ಮಾಡುವ ವಿಧಾನವನ್ನು ತಿಳಿದು ಮಾಡುವರು. ಧರ್ಮಾಚರಣೆಗೆ ಮಹತ್ವ ಅಧಿಕವಾಗಿರುತ್ತದೆ.

ಆಚಾರವಂತ

Pic credit - Pintrest

ಇವರ ವ್ಯಕ್ತಿತ್ವಕ್ಕೆ ಗೌರವ ತಾನಾಗಿಯೇ ಹುಡುಕಿಕೊಂಡು ಬರುವುದು. ಇವರ ಮನೋಭಾವವೂ ಕೂಡ ಎಲ್ಲರು ತಲೆಬಾಗುವಂತೆಯೇ ಇರುತ್ತದೆ. ಇವರು ತಲೆ ತಗ್ಗಿಸಿ ನಡೆಯಲಾರರು.

ಗೌರವ

Pic credit - Pintrest

ಮಾನ ಮಾರ್ಯಾದೆಗೆ ಅಂಜುವರು. ಅದು ಹಾಳಾಗದಂತೆ ಬಹಳ ಜಾಗರೂಕತೆಯಿಂದ ತಮ್ಮ ಜೀವನವನ್ನು ನಡೆಸಲು ಇಷ್ಟಪಡುವರು ಹಾಗೂ ಪ್ರಯತ್ನದಲ್ಲಿಯೂ ಇರುವರು.

ಮಾನ ಮಾರ್ಯಾದೆ

Pic credit - Pintrest

ನಕ್ಷತ್ರದ ಹೆಸರೇ ಹೇಳುವಂತೆ ಧನವು ಇವರಲ್ಲಿ ಸಮೃದ್ಧವಾಗಿರುವುದು. ಈ ನಕ್ಷತ್ರದವರೂ ಸಂಪಾದನೆ ಮಾಡಬಹುದು ಅಥವಾ ಪೂರ್ವಾರ್ಜಿತ ಆಸ್ತಿಯೂ ಇವರ ಪಾಲಾಗಲಿದೆ.

ಧನ ಸಮೃದ್ಧಿ

Pic credit - Pintrest

ಇವರ ಯೋಗ್ಯತೆಗೆ ತಕ್ಕಂತೆ ಉನ್ನತ ಸ್ಥಾನ, ಮಾನಗಳು ಪ್ರಾಪ್ತವಾಗಲಿವೆ. ಯಾವುದಾದರು ಮುಖ್ಯ ಹುದ್ದೆಯಲ್ಲಿ ಇವರು ಸ್ಥಾನವನ್ನು ಪಡೆಯುವರು.

ಉನ್ನತ ಸ್ಥಾನ

Pic credit - Pintrest

ಇವರು ಹೆಚ್ಚು ಸಂಗೀತದಲ್ಲಿ ಆಸಕ್ತಿಯುಳ್ಳವರು. ಸ್ವತಃ ಸಂಗೀತವನ್ನು ಹಾಡುವರು ಅಥವಾ ಹೆಚ್ಚು ಸಂಗೀತ ಮೊದಲಾದ ಲಲಿತಕಲೆಗಳನ್ನು ನೋಡಲು ಕೇಳಲು ಇಷ್ಟ ಪಡುತ್ತಾರೆ.

ಸಂಗೀತದಲ್ಲಿ ಆಸಕ್ತಿ

Pic credit - Pintrest