24 July 2025

Pic credit - Pintrest

Author: Akshatha Vorkady

ಭೀಮನ ಅಮಾವಾಸ್ಯೆಯಂದು ಹಸಿರು ಬಳೆಯನ್ನೇಕೆ ಧರಿಸಬೇಕು ?

ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ ಭೀಮನ ಅಮಾವಾಸ್ಯೆಯ ವ್ರತವನ್ನು ಆಚರಿಸಲಾಗುತ್ತದೆ. 

ಭೀಮನ ಅಮಾವಾಸ್ಯೆ

Pic credit - Pintrest

ಕೇವಲ ಮದುವೆಯಾದ ಗೃಹಿಣಿಯರು ಮಾತ್ರವಲ್ಲದೆ ಅವಿವಾಹಿತ ಯುವತಿಯರು ಕೂಡ ಈ ವ್ರತವನ್ನು ಮಾಡಬಹುದು.

ಭೀಮನ ಅಮಾವಾಸ್ಯೆ

Pic credit - Pintrest

ಮುಖ್ಯವಾಗಿ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ಬಹಳ ವಿಶೇಷವಾದುದು. ಪತಿಯ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಕೋರಿ ಪಾದ ಪೂಜೆ ಮಾಡುತ್ತಾರೆ.

ಪಾದ ಪೂಜೆ 

Pic credit - Pintrest

ಅದೇ ರೀತಿ ಅವಿವಾಹಿತ ಯುವತಿಯರು ಉತ್ತಮ ಗುಣವುಳ್ಳ ಪತಿಯನ್ನು ಪಡೆದುಕೊಳ್ಳುವುದಕ್ಕಾಗಿ ಈ ವ್ರತವನ್ನು ಮಾಡುತ್ತಾರೆ.

ಗುಣವಂತ ಪತಿ

Pic credit - Pintrest

ಇದಲ್ಲದೇ ಭೀಮನ ಅಮಾವಾಸ್ಯೆಯಂದು ಹಸಿರು ಬಳೆಯನ್ನು ತೊಡುವ ಸಂಪ್ರದಾಯವಿದೆ. ಈ ಸಂಪ್ರದಾಯದ ಹಿಂದಿನ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

ಹಸಿರು ಬಳೆ

Pic credit - Pintrest

ಹಿಂದೂ ಧರ್ಮದಲ್ಲಿ ಹಸಿರು ಬಣ್ಣಕ್ಕೆ ವಿಶೇಷ ಮಹತ್ವವಿದ್ದು, ಇದು ಸಮೃದ್ಧಿ, ಹೊಸ ಆರಂಭ, ಪ್ರಕೃತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.

ಹಸಿರು ಬಣ್ಣ

Pic credit - Pintrest

ಈ ದಿನ ಮಹಿಳೆಯರು ಹಸಿರು ಬಣ್ಣದ ಗಾಜಿನ ಬಳೆಗಳನ್ನು ಧರಿಸುವುದರಿಂದ ಅವರಿಗೆ ದೈವಿಕ ಶಕ್ತಿ ಮತ್ತು ಆಧ್ಯಾತ್ಮಿಕ ಸಂಪರ್ಕ ದೊರೆಯುತ್ತದೆ ಎಂದು ನಂಬಲಾಗಿದೆ.

ಗಾಜಿನ ಬಳೆ

Pic credit - Pintrest

ಇದಲ್ಲದೇ ಲಕ್ಷ್ಮೀ ದೇವಿಯ ಆಶೀರ್ವಾದ ದೊರೆಯುವುದರ ಜೊತೆಗೆ ವೈವಾಹಿಕ ಜೀವನದಲ್ಲಿ ಸಾಮರಸ್ಯ, ಪ್ರೀತಿ ಮತ್ತು ಶಾಂತಿ ನೆಲೆಸುತ್ತದೆ ಎಂದು ಹಿರಿಯರು ಹೇಳುತ್ತಾರೆ. 

ವೈವಾಹಿಕ ಜೀವನ

Pic credit - Pintrest