ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ಭಾರತದ ಆಟಗಾರರ ಪಟ್ಟಿ

29 June 2025                                    Author: ಪೃಥ್ವಿ ಶಂಕರ

Pic credit - Google

ಪ್ರಸ್ತುತ ಇಂಗ್ಲೆಂಡ್​ನಲ್ಲಿ ಕೌಂಟಿ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಭಾರತದ ಅನೇಕ ಸ್ಟಾರ್ ಆಟಗಾರರು ಆಡುತ್ತಿದ್ದಾರೆ.

ಕೌಂಟಿ ಚಾಂಪಿಯನ್‌ಶಿಪ್

Pic credit - Google

ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ ಒಟ್ಟು 5 ಆಟಗಾರರು ಕೌಂಟಿ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸುತ್ತಿದ್ದಾರೆ. ಅವರೆಲ್ಲರ ವಿವರ ಇಲ್ಲಿದೆ.

5 ಭಾರತೀಯರು

Pic credit - Google

ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ವರ್ಷಗಳಿಂದ ಈ ಕೌಂಟಿ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುತ್ತಿದ್ದು, ನಾರ್ಥಾಂಪ್ಟನ್‌ಶೈರ್ ತಂಡದ ಪರ ಆಡುತ್ತಿದ್ದಾರೆ.

ಯುಜ್ವೇಂದ್ರ ಚಹಾಲ್

Pic credit - Google

ಟೀಂ ಇಂಡಿಯಾದಿಂದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಇದೇ ಮೊದಲ ಬಾರಿಗೆ ನಾಟಿಂಗ್‌ಹ್ಯಾಮ್‌ಶೈರ್ ತಂಡದ ಪರ ಆಡುತ್ತಿದ್ದಾರೆ.

ಇಶಾನ್ ಕಿಶನ್

Pic credit - Google

ಭಾರತ ಟಿ20 ತಂಡದಲ್ಲಿ ಖಾಯಂ ಸದಸ್ಯನೆನಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್​ಮನ್ ತಿಲಕ್ ವರ್ಮಾ ಹ್ಯಾಂಪ್‌ಶೈರ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ತಿಲಕ್ ವರ್ಮಾ

Pic credit - Google

ಟೀಂ ಇಂಡಿಯಾದ ಯುವ ಬ್ಯಾಟ್ಸ್​ಮನ್ ರುತುರಾಜ್ ಗಾಯಕ್ವಾಡ್ ಕೂಡ ಕೌಂಟಿಯಲ್ಲಿ ಆಡುತ್ತಿದ್ದು, ಯಾರ್ಕ್‌ಷೈರ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.

ರುತುರಾಜ್ ಗಾಯಕ್ವಾಡ್

Pic credit - Google

ಟೀಂ ಇಂಡಿಯಾದ ಯುವ ವೇಗದ ಬೌಲರ್ ಖಲೀಲ್ ಅಹ್ಮದ್ ಎಸೆಕ್ಸ್ ತಂಡದ ಪರ ಆಡುತ್ತಿದ್ದಾರೆ.

ಖಲೀಲ್ ಅಹ್ಮದ್

Pic credit - Google