ಇಂಗ್ಲೆಂಡ್‌ನಲ್ಲಿ ಶತಕ ಬಾರಿಸಿ ರವಿಶಾಸ್ತ್ರಿ ದಾಖಲೆ ಸರಿಗಟ್ಟಿದ ಜೈಸ್ವಾಲ್
TV9 Kannada Logo For Webstory First Slide

ಇಂಗ್ಲೆಂಡ್‌ನಲ್ಲಿ ಶತಕ ಬಾರಿಸಿ ರವಿಶಾಸ್ತ್ರಿ ದಾಖಲೆ ಸರಿಗಟ್ಟಿದ ಜೈಸ್ವಾಲ್

20 June 2025                                    Author: ಪೃಥ್ವಿ ಶಂಕರ

Pic credit - Google

ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ಪ್ರದರ್ಶನ ನೀಡಿ ಅಮೋಘ ಶತಕ ಬಾರಿಸಿದರು.

ಯಶಸ್ವಿ ಜೈಸ್ವಾಲ್

Pic credit - Google

ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 144 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 16 ಬೌಂಡರಿ ಹಾಗೂ 1 ಸಿಕ್ಸರ್ ಸಹ ಬಾರಿಸಿದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕವನ್ನು ಪೂರೈಸಿದರು.

ಐದನೇ ಶತಕ

Pic credit - Google

ಇದರೊಂದಿಗೆ, ಅವರು 23 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದಲ್ಲದೆ, ಈ ವಿಷಯದಲ್ಲಿ ರವಿಶಾಸ್ತ್ರಿ ಅವರ ದಾಖಲೆಯನ್ನು ಸರಿಗಟ್ಟಿದರು

ಅತಿ ಹೆಚ್ಚು ಶತಕ

Pic credit - Google

ಸಚಿನ್ ತೆಂಡೂಲ್ಕರ್ 23 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಸಚಿನ್ ತೆಂಡೂಲ್ಕರ್

Pic credit - Google

ಸಚಿನ್ ಒಟ್ಟು ಎಂಟು ಶತಕಗಳನ್ನು ಗಳಿಸಿದರೆ, ಸುನಿಲ್ ಗವಾಸ್ಕರ್ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ರವಿಶಾಸ್ತ್ರಿ ತಲಾ 3 ಶತಕಗಳನ್ನು ಗಳಿಸಿದ್ದಾರೆ.

ರವಿಶಾಸ್ತ್ರಿ

Pic credit - Google

ಇದು ಮಾತ್ರವಲ್ಲದೆ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ.

ಐದನೇ ಭಾರತೀಯ

Pic credit - Google

ಆದಾಗ್ಯೂ ಜೈಸ್ವಾಲ್ ಶತಕದ ಬಳಿಕ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ವಲ್ಪ ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದ ಜೈಸ್ವಾಲ್ 101 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

101 ರನ್​ಗಳಿಗೆ ಔಟ್

Pic credit - Google