2000 ದಿಂದೀಚೆಗೆ ಇಂಗ್ಲೆಂಡ್​ನಲ್ಲಿ ಶತಕ ಬಾರಿಸಿದವರಲ್ಲಿ ಕನ್ನಡಿಗರದ್ದೇ ಪಾರುಪತ್ಯ..!

18 June 2025                                    Author: ಪೃಥ್ವಿ ಶಂಕರ

Pic credit - Google

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಪ್ರಾರಂಭವಾಗಲಿದೆ. ಆದಾಗ್ಯೂ ತಂಡದ ಪ್ಲೇಯಿಂಗ್ 11 ಬಗ್ಗೆ ಯಾವುದೇ ಖಚಿತತೆ ಸಿಕ್ಕಿಲ್ಲ.

ಭಾರತ-ಇಂಗ್ಲೆಂಡ್ ಸರಣಿ

Pic credit - Google

ಆದರೆ ಅದಕ್ಕೂ ಮುನ್ನ ಇಂಗ್ಲೆಂಡ್ ನೆಲದಲ್ಲಿ 2000 ದಿಂದ ಈಚೆಗೆ ಆರಂಭಿಕರಾಗಿ ಯಾರು ಹೆಚ್ಚು ಯಶಸ್ವಿಯಾಗಿದ್ದಾರೆ? ಯಾರು ಅಧಿಕ ಶತಕ ಸಿಡಿಸಿದ್ದಾರೆ ಎಂಬುದನ್ನು ನೋಡೋಣ

ಅಧಿಕ ಶತಕ

Pic credit - Google

2000 ದಿಂದೀಚೆಗೆ, ಐದು ಭಾರತೀಯ ಆರಂಭಿಕರು ಇಂಗ್ಲೆಂಡ್‌ನಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಕನ್ನಡಿಗರ ಹೆಸರೂ ಸೇರಿದೆ.

ಐದು ಭಾರತೀಯರು

Pic credit - Google

ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಹೆಸರು ಕನ್ನಡಿಗ ಕೆಎಲ್ ರಾಹುಲ್​ ಅವರದ್ದು, ಅವರು 2018 ಮತ್ತು 2021 ರಲ್ಲಿ ಕ್ರಮವಾಗಿ 149 ಮತ್ತು 129 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ.

ಕೆಎಲ್ ರಾಹುಲ್

Pic credit - Google

ಎರಡನೇ ಸ್ಥಾನದಲ್ಲಿರುವ ಮತ್ತೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್, 2011 ರಲ್ಲಿ 146 ರನ್ ಹಾಗೂ ಅದೇ ವರ್ಷ 117 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಾಹುಲ್ ದ್ರಾವಿಡ್

Pic credit - Google

ಮೂರನೇ ಸ್ಥಾನದಲ್ಲಿರುವ ಮುರುಳಿ ವಿಜಯ್ ಆರಂಭಿಕನಾಗಿ 2014 ರ ನಾಟಿಂಗ್‌ಹ್ಯಾಮ್​ ಟೆಸ್ಟ್‌ನಲ್ಲಿ 146 ರನ್ ಬಾರಿಸಿದ್ದರು.

ಮುರುಳಿ ವಿಜಯ್

Pic credit - Google

ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 2021 ರ ದಿ ಓವಲ್ ಟೆಸ್ಟ್‌ನಲ್ಲಿ 127 ರನ್​ ಕಲೆಹಾಕಿದ್ದರು.

ರೋಹಿತ್ ಶರ್ಮಾ

Pic credit - Google

2002 ರಲ್ಲಿ ನಡೆದ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಆರಂಭಿಕನಾಗಿ 106 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ವೀರೇಂದ್ರ ಸೆಹ್ವಾಗ್

Pic credit - Google