IPL 2025: ವೇಗದ ಅರ್ಧಶತಕ; ದಾಖಲೆ ಬರೆದ ಡೆವಾಲ್ಡ್ ಬ್ರೆವಿಸ್

25 May 2025

Pic credit: Google

 By: ಪೃಥ್ವಿ ಶಂಕರ 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

Pic credit: Google

ಡೆವಾಲ್ಡ್ ಬ್ರೆವಿಸ್

ಬ್ರೆವಿಸ್ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 57 ರನ್ ಗಳಿಸಿ ಔಟಾದರು ಮತ್ತು ಜಡೇಜಾ ಜೊತೆಗೆ ಐದನೇ ವಿಕೆಟ್‌ಗೆ 74 ರನ್‌ಗಳ ಪಾಲುದಾರಿಕೆಯನ್ನು ನೀಡಿದರು.

Pic credit: Google

23 ಎಸೆತ 57 ರನ್

ಇದರೊಂದಿಗೆ, ಬ್ರೆವಿಸ್ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ನಾಲ್ಕನೇ ಸಿಎಸ್‌ಕೆ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Pic credit: Google

ವೇಗದ ಅರ್ಧಶತಕ

2014 ರಲ್ಲಿ ಪಂಜಾಬ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸುರೇಶ್ ರೈನಾ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅತ್ಯಂತ ವೇಗದ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

Pic credit: Google

ಸುರೇಶ್ ರೈನಾ

2022 ರಲ್ಲಿ ರಾಜಸ್ಥಾನ ಪರ ಮೊಯಿನ್ ಅಲಿ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಪರ ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

Pic credit: Google

ಅಜಿಂಕ್ಯ ರಹಾನೆ

ಬ್ರೆವಿಸ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಗುಜರಾತ್ ತಂಡಕ್ಕೆ 231 ರನ್‌ಗಳ ಗುರಿ ನೀಡಿದ ಸಿಎಸ್​ಕೆ 83 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

Pic credit: Google

231 ರನ್‌ಗಳ ಗುರಿ

231 ರನ್ ಗುರಿ ಬೆನ್ನಟ್ಟಿದ ಗುಜರಾತ್ 147 ರನ್​​ಗಳಿಗೆ ಆಲೌಟ್ ಆಗುವ ಮೂಲಕ ಸಿಎಸ್​ಕೆ ವಿರುದ್ಧ ಹೀನಾಯ ಸೋಲು ಅನುಭವಿಸಿತು.

Pic credit: Google

147 ರನ್​​ಗಳಿಗೆ ಆಲೌಟ್