IPL 2025: ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ ಯಾರು ಗೊತ್ತಾ?

10 May 2025

Pic credit: Google

 By: ಪೃಥ್ವಿ ಶಂಕರ 

ಈ ಬಾರಿಯ ಐಪಿಎಲ್ 2025 ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ, ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಲಾಗಿದೆ.

Pic credit: Google

ಐಪಿಎಲ್ ಸ್ಥಗಿತ

ಎರಡನೇ ಹಂತದ ಐಪಿಎಲ್ ಆರಂಭಕ್ಕೂ ಮುನ್ನ ಮೊದಲ ಹಂತದ ಐಪಿಎಲ್​ನಲ್ಲಿ ಭಾರತೀಯ ಬೌಲರ್ ಗರಿಷ್ಠ ಸಂಖ್ಯೆಯ ಡಾಟ್ ಬಾಲ್‌ಗಳನ್ನು ಎಸೆದ ದಾಖಲೆ ಬರೆದಿದ್ದಾರೆ.

ಖಲೀಲ್ ಅಹ್ಮದ್

Pic credit: Google

ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ, ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಖಲೀಲ್ ಅಹ್ಮದ್ ಅವರು ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಈ ಸೀಸನ್‌ನಲ್ಲಿ ಅವರು ಒಟ್ಟು 119 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

119 ಡಾಟ್ ಬಾಲ್‌

Pic credit: Google

ಖಲೀಲ್ ಅಹ್ಮದ್ ಕೂಡ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದು 9.71 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

12 ಪಂದ್ಯಗಳಲ್ಲಿ 14 ವಿಕೆಟ್‌

Pic credit: Google

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವರುಣ್ ಚಕ್ರವರ್ತಿ ಪ್ರಸಕ್ತ ಸೀಸನ್‌ನಲ್ಲಿ ಇಲ್ಲಿಯವರೆಗೆ 115 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

ವರುಣ್ ಚಕ್ರವರ್ತಿ

Pic credit: Google

ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ 114 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

ಮೊಹಮ್ಮದ್ ಸಿರಾಜ್

Pic credit: Google

ಸಿರಾಜ್ ಜೊತೆಗೆ ಗುಜರಾತ್ ಟೈಟಾನ್ಸ್ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ 112 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

ಪ್ರಸಿದ್ಧ್ ಕೃಷ್ಣ

Pic credit: Google

ರಾಜಸ್ಥಾನ್ ರಾಯಲ್ಸ್‌ನ ಜೋಫ್ರಾ ಆರ್ಚರ್ ಅಗ್ರ -5 ರಲ್ಲಿರುವ ಏಕೈಕ ವಿದೇಶಿ ಬೌಲರ್ ಆಗಿದ್ದು, ಇದುವರೆಗೆ 110 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

ಜೋಫ್ರಾ ಆರ್ಚರ್

Pic credit: Google