ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸಾಯಿ ಸುದರ್ಶನ್

PC: IPL BY: Zahir

30 April 2025

ಆರೆಂಜ್ ಕ್ಯಾಪ್ ರೇಸ್

ಐಪಿಎಲ್ 2025ರ ಆರೆಂಜ್ ಕ್ಯಾಪ್ ರೇಸ್​ನಲ್ಲಿ ವಿರಾಟ್ ಕೊಹ್ಲಿಯನ್ನು ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಹಿಂದಿಕ್ಕಿದ್ದಾರೆ.

ಸಾಯಿ ಸುದರ್ಶನ್

ಈ ಬಾರಿಯ ಐಪಿಎಲ್​ನಲ್ಲಿ 9 ಇನಿಂಗ್ಸ್ ಆಡಿರುವ ಸಾಯಿ ಸುದರ್ಶನ್ ಒಟ್ಟು 456 ರನ್ ಬಾರಿಸಿ ಅಗ್ರಸ್ಥಾನಕ್ಕೇರಿದ್ದಾರೆ.

ವಿರಾಟ್ ಕೊಹ್ಲಿ

ಈ ಬಾರಿಯ ಐಪಿಎಲ್ ನಲ್ಲಿ 10 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 6 ಅರ್ಧಶತಕಗಳೊಂದಿಗೆ 443 ರನ್ ಕಲೆಹಾಕಿದ್ದಾರೆ.

ಸೂರ್ಯಕುಮಾರ್

ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ 3ನೇ ಸ್ಥಾನದಲ್ಲಿದ್ದಾರೆ. ಸೂರ್ಯ ಒಟ್ಟು 427 ರನ್ ಕಲೆಹಾಕಿದ್ದಾರೆ.

ಯಶಸ್ವಿ ಜೈಸ್ವಾಲ್

ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ 426 ರನ್ ಬಾರಿಸಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಜೋಸ್ ಬಟ್ಲರ್

ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವುದು ಜೋಸ್ ಬಟ್ಲರ್. ಜಿಟಿ ಪರ ಕಣಕ್ಕಿಳಿಯುತ್ತಿರುವ ಬಟ್ಲರ್ 406 ರನ್ ​ಗಳಿಸಿದ್ದಾರೆ.

ನಿಕೋಲಸ್ ಪೂರನ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಡಿಬಡಿ ದಾಂಡಿಗ ನಿಕೋಲಸ್ ಪೂರನ್ 404 ರನ್ ಕಲೆಹಾಕಿ 7ನೇ ಸ್ಥಾನದಲ್ಲಿದ್ದಾರೆ.

ಶುಭ್​ಮನ್ ಗಿಲ್

ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವುದು ಶುಭ್ ಮನ್ ಗಿಲ್. ಜಿಟಿ ತಂಡದ ನಾಯಕ ಈವರೆಗೆ 389 ರನ್ ಕಲೆಹಾಕಿದ್ದಾರೆ.