‘ವಿಷಕಾರಿ ಜನರಿದ್ದರು'; ಐಪಿಎಲ್ ತಂಡದ ಬಗ್ಗೆ ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ

16 June 2025

Pic credit: Google

 By: ಪೃಥ್ವಿ ಶಂಕರ 

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಹಳೆಯ ಐಪಿಎಲ್ ತಂಡದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Pic credit: Google

ಎಬಿ ಡಿವಿಲಿಯರ್ಸ್

ವಾಸ್ತವವಾಗಿ ಡಿವಿಲಿಯರ್ಸ್ ಬಹಳ ವರ್ಷಗಳ ಕಾಲ ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಭಾಗವಾಗಿದ್ದರು. ಆದರೆ, ಇದಕ್ಕೂ ಮೊದಲು ಅವರು ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡುತ್ತಿದ್ದರು.

Pic credit: Google

ಡೆಲ್ಲಿ ಡೇರ್‌ಡೆವಿಲ್ಸ್

ಈಗ ಡಿವಿಲಿಯರ್ಸ್ ಡೆಲ್ಲಿ ಡೇರ್‌ಡೆವಿಲ್ಸ್ ಬಗ್ಗೆ ಹೇಳಿಕೆ ನೀಡಿದ್ದು ‘ನಿಮಗೆ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಆದರೆ ಆ ತಂಡದಲ್ಲಿ ಬೆಂಕಿ ಹಚ್ಚುವ ಜನರಿದ್ದರು. ಆ ತಂಡದಲ್ಲಿ ಬಹಳಷ್ಟು ವಿಷಕಾರಿ ಪಾತ್ರಗಳಿದ್ದವು.

Pic credit: Google

ಬೆಂಕಿ ಹಚ್ಚುವ ಜನ

ನನ್ನ ಅನುಭವವನ್ನು ಉತ್ತಮಗೊಳಿಸಿದ ಅನೇಕ ಶ್ರೇಷ್ಠ ಆಟಗಾರರು ಡೆಲ್ಲಿ ತಂಡದಲ್ಲಿದ್ದರು. ಆ ಕ್ಷಣಗಳನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ನನ್ನ ಜೀವನ ಮತ್ತು ವೃತ್ತಿಜೀವನದ ಕೆಲವು ಮುಖ್ಯಾಂಶಗಳು ಆ ಸಮಯದಲ್ಲಿ ನಡೆದವು.

Pic credit: Google

ಶ್ರೇಷ್ಠ ಆಟಗಾರರು

2009 ರ ಐಪಿಎಲ್​ ತುಂಬಾ ಚೆನ್ನಾಗಿತ್ತು. ಏಕೆಂದರೆ ಆ ಸೀಸನ್​ನ ಬಹುತೇಕ ಪಂದ್ಯಗಳನ್ನು ನಾನು ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದೆ. ಆ ಸೀಸನ್‌ನಲ್ಲಿ ನಾನು 465 ರನ್ ಕೂಡ ಬಾರಿಸಿದ್ದೆ.

Pic credit: Google

465 ರನ್ ಬಾರಿಸಿದ್ದೆ

ಆದಾಗ್ಯೂ 2011 ರ ಮೆಗಾ ಹರಾಜಿಗೂ ಮುನ್ನ ನನ್ನನ್ನು ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಆ ಬಳಿಕ ನನ್ನ ಹೆಸರು ಹರಾಜಿನಲ್ಲಿ ಪಟ್ಟಿಯಲ್ಲಿರುವುದನ್ನು ನೋಡಿ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

Pic credit: Google

ನನ್ನ ಹೆಸರು ಹರಾಜಿನಲ್ಲಿ

ನಾನು ಆರ್‌ಸಿಬಿ ತಂಡಕ್ಕೆ ಸೇರಿದ ತಕ್ಷಣ, ಮ್ಯಾನೇಜ್​ಮೆಂಟ್ ನಾನು ಪ್ರತಿ ಪಂದ್ಯದಲ್ಲೂ ಆಡಬೇಕೆಂದು ಬಯಸುತ್ತದೆ ಎಂದು ನನಗೆ ಅನಿಸಿತು.

Pic credit: Google

ಆರ್‌ಸಿಬಿ ತಂಡ

ಅಲ್ಲದೆ ನೀವು ನಮ್ಮ ತಂಡದ ಪ್ರಮುಖ ಆಟಗಾರ ಎಂದು ಮ್ಯಾನೇಜ್​ಮೆಂಟ್ ಹೇಳಿದ್ದು ನನಗೆ ತುಂಬಾ ಆಶ್ಚರ್ಯವಾಯಿತು. ಆ ಬಳಿಕ ಏನಾಯಿತು ಎಂಬುದು ನಿಮ್ಮ ಮುಂದಿದೆ ಎಂದಿದ್ದಾರೆ.

Pic credit: Google

ಆಶ್ಚರ್ಯವಾಯಿತು