IPL: ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ; ದಾಖಲೆ ಬರೆದ ರೋಹಿತ್ ಶರ್ಮಾ
21 April 2025
Pic credit: IPL X
By: ಪೃಥ್ವಿ ಶಂಕರ
ಐಪಿಎಲ್ 38ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಸುಲಭ ಗೆಲುವು ದಾಖಲಿಸಿತು.
ಮುಂಬೈಗೆ ಗೆಲುವು
Pic credit: IPL X
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನ ಇನ್ನಿಂಗ್ಸ್ ಆಡಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಿದ್ದಾರೆ.
ರೋಹಿತ್ ಶರ್ಮಾ
Pic credit: IPL X
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ರೋಹಿತ್ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 76 ರನ್ ಗಳಿಸಿದರು.
ರೋಹಿತ್ 76 ರನ್
Pic credit: IPL X
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಐಪಿಎಲ್‌ನಲ್ಲಿ ರೋಹಿತ್‌ಗೆ 20 ನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ
Pic credit: IPL X
ಇದರೊಂದಿಗೆ, ರೋಹಿತ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ಅವರು ಆರ್‌ಸಿಬಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
20ನೇ ಪಂದ್ಯ ಶ್ರೇಷ್ಠ
Pic credit: IPL X
ಕೊಹ್ಲಿ ಐಪಿಎಲ್‌ನಲ್ಲಿ 19 ನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದು, ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿಗೆ 4ನೇ ಸ್ಥಾನ
Pic credit: IPL X
ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆಯನ್ನು ಎಬಿ ಡಿವಿಲಿಯರ್ಸ್ ಹೊಂದಿದ್ದು ಅವರ ವೃತ್ತಿಜೀವನದಲ್ಲಿ ಈ ಪ್ರಶಸ್ತಿಯನ್ನು 25 ಬಾರಿ ಗೆದ್ದಿದ್ದಾರೆ.
ಎಬಿಗೆ ಮೊದಲ ಸ್ಥಾನ
Pic credit: IPL X
ಕ್ರಿಸ್ ಗೇಲ್ ಈ ಪ್ರಶಸ್ತಿಯನ್ನು 22 ಬಾರಿ ಗೆದ್ದಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.