ಭಾರತದ ‘ಸಿಕ್ಸರ್ ರಾಣಿ' ಸ್ಮೃತಿ ಮಂಧಾನ

11 May 2025

Pic credit: BCCI Women X

 By: ಪೃಥ್ವಿ ಶಂಕರ 

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಸ್ಮೃತಿ ಮಂಧಾನ ಲಂಕಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದರು.

Pic credit: BCCI Women X

ಸ್ಮೃತಿ ಮಂಧಾನ

ಶ್ರೀಲಂಕಾ ವಿರುದ್ಧ ಸ್ಮೃತಿ ಮಂಧಾನ 101 ಎಸೆತಗಳಲ್ಲಿ 116 ರನ್ ಗಳಿಸಿದರು. ಇದರಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು.

Pic credit: BCCI Women X

101 ಎಸೆತಗಳಲ್ಲಿ 116 ರನ್

ಈ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.

Pic credit: BCCI Women X

ಎರಡು ಸಿಕ್ಸರ್‌

ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಸ್ಮೃತಿ ಪಾಲಾಗಿದೆ.

Pic credit: BCCI Women X

ಅತಿ ಹೆಚ್ಚು ಸಿಕ್ಸರ್‌

ಸ್ಮೃತಿ ಮಂಧಾನ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ 54 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಹರ್ಮನ್ಪ್ರೀತ್ ಕೌರ್ ಹೆಸರಿನಲ್ಲಿ ದಾಖಲಾಗಿತ್ತು. ಅವರು ಏಕದಿನ ಪಂದ್ಯಗಳಲ್ಲಿ 53 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Pic credit: BCCI Women X

54 ಸಿಕ್ಸರ್‌

ಈ ಶತಕ ಸ್ಮೃತಿ ಮಂಧಾನಾಗೆ ಹಲವು ವಿಧಗಳಲ್ಲಿ ವಿಶೇಷವಾಗಿತ್ತು. ಅವರು ಏಕದಿನ ಕ್ರಿಕೆಟ್‌ನಲ್ಲಿ 11 ನೇ ಬಾರಿಗೆ 100 ರನ್‌ಗಳ ಗಡಿಯನ್ನು ತಲುಪಿದರು.

Pic credit: BCCI Women X

11 ನೇ ಶತಕ

ಮಹಿಳಾ ಕ್ರಿಕೆಟ್‌ನಲ್ಲಿ ಏಕದಿನ ಪಂದ್ಯಗಳಲ್ಲಿ 11 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ. ಸ್ಮೃತಿಗೂ ಮೊದಲು ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಈ ಸಾಧನೆ ಮಾಡಿದ್ದಾರೆ.

Pic credit: BCCI Women X

ಮೂರನೇ ಬ್ಯಾಟ್ಸ್‌ಮನ್

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಸ್ಮೃತಿ ಮಂಧಾನ, 10 ಶತಕಗಳನ್ನು ಬಾರಿಸಿದ್ದ ಟ್ಯಾಮಿ ಬ್ಯೂಮಾಂಟ್ ಅವರನ್ನು ಹಿಂದಿಕ್ಕಿದ್ದಾರೆ.

Pic credit: BCCI Women X

ಅತಿ ಹೆಚ್ಚು ಶತಕ