IPL ನಲ್ಲಿ ಅತೀ ಹೆಚ್ಚು ಬಾರಿ 200+ ಸ್ಕೋರ್
ಗಳಿಸಿದ ತಂಡಗಳು
27 April 2025 Author: Zahir
Pic credit - Google
ಐಪಿಎಲ್ನ 44ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 201 ರನ್ ಕಲೆಹಾಕಿತು. ಈ ಮೂಲಕ 200+ ರನ್ಗಳಿಸುವುದರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ತಂಡಗಳನ್ನು ಹಿಂದಿಕ್ಕಿದೆ.
ಪಂಜಾಬ್ ಪರಾಕ್ರಮ
ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ನಲ್ಲಿ 28ನೇ ಬಾರಿ 200+ ಸ್ಕೋರ್ಗಳಿಸಿದೆ. ಈ ಮೂಲಕ 200+ ರನ್ಗಳಿಕೆಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ.
28ನೇ ಬಾರಿ ಸಾಧನೆ
ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ಕಲೆಹಾಕಿದ ದಾಖಲೆ ಸಿಎಸ್ಕೆ ತಂಡದ ಹೆಸರಿನಲ್ಲಿದೆ. ಸಿಎಸ್ಕೆ ಒಟ್ಟು 33 ಬಾರಿ ಈ ಸಾಧನೆ ಮಾಡಿದೆ.
ಸಿಎಸ್ಕೆ ನಂಬರ್ 1
200+ ಸ್ಕೋರ್ಗಳಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಆರ್ಸಿಬಿ ತಂಡ. ರಾಯಲ್ ಪಡೆಯು ಈವರೆಗೆ 32 ಬಾರಿ 200+ ಸ್ಕೋರ್ ಕಲೆಹಾಕಿದೆ.
ಆರ್ಸಿಬಿ ಮಿಂಚಿಂಗ್
ಐಪಿಎಲ್ನಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ಸಮಬಲ ಹೊಂದಿದೆ. ಉಭಯ ತಂಡಗಳು 27 ಬಾರಿ 200+ ಸ್ಕೋರ್ಗಳಿಸಿದೆ.
ಕೆಕೆಆರ್-ಮುಂಬೈ ಸಮಬಲ
ಈ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ 5ನೇ ಸ್ಥಾನದಲ್ಲಿದೆ. ಈ ತಂಡಗಳು ಒಟ್ಟು 23 ಬಾರಿ ಈ ಸಾಧನೆ ಮಾಡಿದ್ದಾರೆ.
ಆರ್ಆರ್ - ಎಸ್ಆರ್ಹೆಚ್
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ನಲ್ಲಿ 18 ಬಾರಿ 200+ ಸ್ಕೋರ್ ಕಲೆಹಾಕಿದೆ. ಈ ಮೂಲಕ ಈ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಅಲಂಕರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ 11 ಬಾರಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡ 10 ಬಾರಿ 200+ ಸ್ಕೋರ್ ಗಳಿಸಿದ್ದಾರೆ.