2023- 25 ರ ಡಬ್ಲ್ಯುಟಿಸಿಯಲ್ಲಿ ಟೆಸ್ಟ್ಗೆ ವಿದಾಯ ಹೇಳಿದ ಲೆಜೆಂಡ್ಸಗಳ ಪಟ್ಟಿ
19 June 2025 Author: ಪೃಥ್ವಿ ಶಂಕರ
Pic credit - Google
2023- 25 ರ ಡಬ್ಲ್ಯುಟಿಸಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗುವುದರೊಂದಿಗೆ ಅಂತ್ಯಗೊಂಡಿದೆ. ಆದಾಗ್ಯೂ ಈ ಮೂರನೇ ಆವೃತ್ತಿ ಮುಗಿಯುವ ವೇಳೆಗೆ 8 ಸ್ಟಾರ್ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ
Pic credit - Google
ಅದರಲ್ಲಿ ಮುಖ್ಯವಾಗಿ ಭಾರತ ಟೆಸ್ಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮೇ 7 ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ ಆಡಿದ 67 ಪಂದ್ಯಗಳಲ್ಲಿ 4301 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ
Pic credit - Google
ರೋಹಿತ್ ಶರ್ಮಾ ನಂತರ 36 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಘೋಷಿಸಿದರು. ಕಿಂಗ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 9230 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ
Pic credit - Google
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅಶ್ವಿನ್ ಆಡಿದ 106 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್
Pic credit - Google
ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದರು. ಅವರು 107 ಟೆಸ್ಟ್ ಪಂದ್ಯಗಳಲ್ಲಿ 391 ವಿಕೆಟ್‌ಗಳನ್ನು ಕಬಳಿಸಿದ್ದರು.
ಟಿಮ್ ಸೌಥಿ
Pic credit - Google
ದಕ್ಷಿಣ ಆಫ್ರಿಕಾದ ಸ್ಟಾರ್ ಓಪನರ್ ಡೀನ್ ಎಲ್ಗರ್ ಕೂಡ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಿವೃತ್ತಿ ಘೋಷಿಸಿದರು. ಅವರು 86 ಟೆಸ್ಟ್ ಪಂದ್ಯಗಳಲ್ಲಿ 5347 ರನ್ ಗಳಿಸಿದ್ದಾರೆ.
ಡೀನ್ ಎಲ್ಗರ್
Pic credit - Google
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 112 ಟೆಸ್ಟ್ ಪಂದ್ಯಗಳಲ್ಲಿ 8786 ರನ್ ಗಳಿಸಿದ ನಂತರ ಈ ಸ್ವರೂಪದಿಂದ ನಿವೃತ್ತರಾದರು.
ಡೇವಿಡ್ ವಾರ್ನರ್
Pic credit - Google
ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಸ್ಟುವರ್ಟ್ ಬ್ರಾಡ್ 2023 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು. 38 ವರ್ಷದ ಬೌಲರ್ 167 ಟೆಸ್ಟ್ ಪಂದ್ಯಗಳಲ್ಲಿ 604 ವಿಕೆಟ್‌ಗಳನ್ನು ಕಬಳಿಸಿದ್ದರು.
ಸ್ಟುವರ್ಟ್ ಬ್ರಾಡ್
Pic credit - Google
ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಿವೃತ್ತಿ ಘೋಷಿಸಿದರು. ಅವರು 188 ಪಂದ್ಯಗಳಲ್ಲಿ 704 ವಿಕೆಟ್‌ಗಳನ್ನು ಕಬಳಿಸಿದ್ದರು.