ರೋಹಿತ್- ಕೊಹ್ಲಿ ವೃತ್ತಿಜೀವನದಲ್ಲಿ ಎಷ್ಟೊಂದು ಕಾಕತಾಳೀಯ..!

12 May 2025

Pic credit: Google

 By: ಪೃಥ್ವಿ ಶಂಕರ 

ರೋಹಿತ್ ಶರ್ಮಾ ಮೇ 7 ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೆ, ಇದೀಗ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.

Pic credit: Google

ರೋಹಿತ್- ಕೊಹ್ಲಿ

ಟೆಸ್ಟ್‌ಗೆ ಮೊದಲು, ಇಬ್ಬರೂ ಆಟಗಾರರು ಒಟ್ಟಿಗೆ ಅಂತಾರಾಷ್ಟ್ರೀಯ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದರು. 2024 ರ ಟಿ20 ವಿಶ್ವಕಪ್ ಗೆದ್ದ ನಂತರ ಇಬ್ಬರೂ ಆಟಗಾರರು ಘೋಷಿಸಿದ್ದರು.

Pic credit: Google

ಟಿ20 ಬಳಿಕ ಟೆಸ್ಟ್ ಕ್ರಿಕೆಟ್

ಐಸಿಸಿ ಟ್ರೋಫಿಗಳ ವಿಷಯದಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ 4 ಐಸಿಸಿ ಟೂರ್ನಿಗಳನ್ನು ಗೆದ್ದ ತಂಡದಲ್ಲಿದ್ದರು.

Pic credit: Google

4 ಐಸಿಸಿ ಟೂರ್ನಿ

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಇಬ್ಬರೂ ತಲಾ 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Pic credit: Google

3 ಬಾರಿ ಪಂದ್ಯಶ್ರೇಷ್ಠ

ರೋಹಿತ್ ಮತ್ತು ವಿರಾಟ್ ಐಸಿಸಿ ಪಂದ್ಯಗಳಲ್ಲಿ 3000+ ರನ್ ಗಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಅವರನ್ನು ಹೊರತುಪಡಿಸಿ, ವಿಶ್ವದ ಬೇರೆ ಯಾವುದೇ ಆಟಗಾರ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

Pic credit: Google

3000+ ರನ್

ನಾಯಕರಾಗಿ ರೋಹಿತ್ ಮತ್ತು ವಿರಾಟ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ 2 ರನ್‌ ಬಾರಿಸಿದ್ದರು. ಇದು ಕೂಡ ಒಂದು ವಿಚಿತ್ರ ಕಾಕತಾಳೀಯ.

Pic credit: Google

ಇನ್ನಿಂಗ್ಸ್‌ನಲ್ಲಿ ತಲಾ 2 ರನ್‌

ಏಷ್ಯಾಕಪ್‌ನಲ್ಲೂ ಒಂದು ವಿಚಿತ್ರ ಕಾಕತಾಳೀಯವಿದ್ದು, ಇಬ್ಬರೂ ಆಟಗಾರರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ 11 ರನ್‌ ಕಲೆಹಾಕಿದ್ದರು.

Pic credit: Google

ತಲಾ 11 ರನ್‌

ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇಬ್ಬರೂ ಆಟಗಾರರು ತಮ್ಮ ಮೊದಲ ಟಿ20 ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ತಲಾ 50 ರನ್​ಗಳ ಇನ್ನಿಂಗ್ಸ್ ಆಡಿದ್ದರು.

Pic credit: Google

ತಲಾ 50 ರನ್