ನಟ ಮಾಧವನ್; ಹಣ, ಜೀವನ ಸಮತೋಲನ

25 Sep 2025

Pic credit: Google

By: Vijayasarathy

ಕೈಮೀರಿದ ವೆಚ್ಚ ಬೇಡ

Pic credit: Google

ನಟ ಮಾಧವನ್ ಖರ್ಚು ಮಾಡಲು ಯೋಚಿಸುವುದಿಲ್ಲ. ಆದರೆ, ತನ್ನ ಬಜೆಟ್​ಗಿಂತ ದುಬಾರಿಯಾಗಿದ್ದನ್ನು ಅವರು ಖರೀದಿಸುವುದಿಲ್ಲವಂತೆ.

ಹಣದ ಲೆಕ್ಕ ತಿಳಿದಿರಲಿ

Pic credit: Google

ಆದಾಯ ಎಷ್ಟು, ಖರ್ಚು ಎಷ್ಟು, ಉಳಿದಿರುವುದು ಎಷ್ಟು ಎಂಬುದರ ಸ್ಪಷ್ಟ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದು ನಟ ಮಾಧನ್ ಹೇಳುತ್ತಾರೆ.

ಹೂಡಿಕೆ ವೈವಿಧ್ಯತೆ

Pic credit: Google

ಒಂದೇ ಕಡೆ ಹಣ ಹೂಡಿಕೆ ಮಾಡಿದರೆ ರಿಸ್ಕ್. ಬೇರೆ ಬೇರೆ ಹೂಡಿಕೆಗಳಲ್ಲಿ ಹಣ ತೊಡಗಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಮಾಧವನ್.

ಹೊಸ ಕಲಿಕೆಗೆ ಹೂಡಿಕೆ

Pic credit: Google

ಜೀವನ ಕಲಿಸುವ ಅನುಭವ ಬಹಳ ದೊಡ್ಡದು. ಈ ಅನುಭವಕ್ಕಾಗಿ ಖರ್ಚು ಮಾಡಲು ಹಿಂದೇಟು ಹಾಕಬಾರದು ಎಂಬುದು ಮಾಧವನ್ ಅನಿಸಿಕೆ.

ಅಸ್ವಾಭಾವಿಕ ಸ್ಕೀಮ್

Pic credit: Google

ವಿನಿವಿಂಕ್​ನಂತಹ ಪೋಂಜಿ ಸ್ಕೀಮ್​ನಲ್ಲಿ ಮಾಧವನ್ 30 ಲಕ್ಷ ರೂ ಹೂಡಿಕೆ ಮಾಡಿ ಕಳೆದುಕೊಂಡಿದ್ದರಂತೆ. ಹೂಡಿಕೆ ಮಾಡುವ ಮುನ್ನ ರಿಸ್ಕ್ ತಿಳಿದಿರಬೇಕು ಎನ್ನುತ್ತಾರೆ.

ಹಣಕಾಸು ಶಿಕ್ಷಣ

Pic credit: Google

ಸಿನಿಮಾ ರಂಗದಲ್ಲಿ ನಟ, ನಟಿಯರು ಉತ್ತಮ ಹಣಕಾಸು ಸ್ಥಿತಿಯಲ್ಲಿದ್ದರೆ ತಮ್ಮಿಚ್ಛೆಯ ಸಿನಿಮಾಗಳಲ್ಲಿ ನಟಿಸುವ ಸ್ವಾತಂತ್ರ್ಯ ಇರುತ್ತದೆ ಎಂಬುದು ಮಾಧವನ್ ಅಭಿಪ್ರಾಯ.

ಜಂಟಿ ಮಾಲಕತ್ವ

Pic credit: Google

ಮಾಧವನ್ ಮತ್ತವರ ಪತ್ನಿ ಜಂಟಿ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಆಸ್ತಿ, ಕಾರುಗಳಿಗೆ ಜಂಟಿ ಮಾಲಿಕತ್ವ ಹೊಂದಿದ್ದಾರೆ. ಹಣದ ವಿಚಾರವನ್ನು ಗಂಡ ಹೆಂಡತಿ ಮುಕ್ತವಾಗಿ ಮಾತಾಡುತ್ತಾರಂತೆ.

ಹಣಕ್ಕಿಂತ ಸಂಬಂಧ ಮುಖ್ಯ

Pic credit: Google

ತನ್ನ ಹಣಕಾಸು ಸ್ಥಿತಿ ಉತ್ತಮವಾಗಿದ್ದರೂ ಹೆಚ್ಚಿನ ಸಂತೋಷ ಸಿಗುವುದು ಹಣದಿಂದಲ್ಲ, ಬದಲಾಗಿ ಸಂಬಂಧಗಳಿಂದ, ಎಂದು ಮಾಧವನ್ ಹೇಳುತ್ತಾರೆ.