ಎಟಿಎಂನಲ್ಲಿ ಕ್ಯಾಷ್ ಸಿಕ್ಕಿಕೊಂಡಿದ್ದರೆ ಹೀಗೆ ಮಾಡಿ
22 Sep 2025
Pic credit: Google
By: Vijayasarathy
ಸಿಕ್ಕಿಕೊಂಡ ನೋಟು
ಎಟಿಎಂಗಳಲ್ಲಿ ಕ್ಯಾಷ್ ವಿತ್ಡ್ರಾ ಮಾಡುವಾಗ ಕೆಲವೊಮ್ಮೆ ನೋಟುಗಳು ಸ್ಲಾಟ್ನಲ್ಲೇ ಅರ್ಧಕ್ಕೆ ಸಿಕ್ಕಿಬಿಡುವುದುಂಟು. ಹೀಗಾದಾಗ ಆತಂಕ ಸಹಜ.
Pic credit: Google
ಸರ್ವರ್ ದೋಷ
ಎಟಿಎಂ ಸಿಸ್ಟಂನೊಳಗೆಯೇ ಯಾವುದೋ ದೋಷದಿಂದಾಗಿಯೋ ಅಥವಾ ಸರ್ವರ್ ದೋಷದಿಂದಾಗಿಯೋ ಈ ರೀತಿಯ ಘಟನೆಗಳು ಆಗಬಹುದು.
Pic credit: Google
ಗಾಬರಿ ಬೇಡ
ಎಟಿಎಂನಲ್ಲಿ ನೋಟುಗಳು ಸಿಕ್ಕಿಕೊಂಡಾಗ ಗಾಬರಿಗೊಂಡು, ಅವನ್ನು ಎಳೆಯಲು ಯತ್ನಿಸಬೇಡಿ. ನೋಟುಗಳು ಹರಿದುಹೋಗುವ ಅಪಾಯ ಇರುತ್ತದೆ.
Pic credit: Google
24 ಗಂಟೆಯಲ್ಲಿ..
ನೋಟು ಹೊರಬಾರದೇ ಇದ್ದಲ್ಲಿ, ಬ್ಯಾಂಕು ನಿಮ್ಮ ಖಾತೆಗೆ 24 ಗಂಟೆಯಲ್ಲಿ ಆ ಹಣ ಜಮೆ ಮಾಡಬಹುದು. ಅಲ್ಲಿಯವರೆಗೆ ಕಾಯಿರಿ.
Pic credit: Google
ಎರರ್ ಮೆಸೇಜ್
ಎಟಿಎಂನಲ್ಲಿ ಏನಾದರೂ ಎರರ್ ಮೆಸೇಜ್ ಬಂದಿದ್ದರೆ ಅದರ ಒಂದು ಫೋಟೋ ಕ್ಲಿಕ್ಕಿಸಿ ಇಟ್ಟುಕೊಂಡಿರಿ. ಟ್ರಾನ್ಸಾಕ್ಷನ್ ರೆಸಿಪ್ಟ್ ಬಂದಿದ್ದರೆ ಇಟ್ಟಿರಿ.
Pic credit: Google
ಕಸ್ಟಮರ್ ಕೇರ್
ನಿಮ್ಮ ಅಕೌಂಟ್ನಿಂದ ಹಣ ಕಡಿತಗೊಂಡಿದ್ದು 24 ಗಂಟೆಯಾದರೂ ವಾಪಸ್ ಕ್ರೆಡಿಟ್ ಆಗದೇ ಇದ್ದರೆ ಬ್ಯಾಂಕ್ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ.
Pic credit: Google
ದಾಖಲೆಗಳು ಇರಲಿ
ಎಟಿಎಂ ಸ್ಥಳ, ಸಮಯ, ಯಾವ ಬ್ಯಾಂಕ್ನ ಎಟಿಎಂ, ಹಣ ಕಡಿತಗೊಂಡಿದ್ದರ ರಸೀದಿ ಅಥವಾ ಎಸ್ಸೆಮ್ಮೆಸ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ವಿವರ ನೀಡಿ.
Pic credit: Google
ಆನ್ಲೈನಲ್ಲಿ ದೂರು
ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಅಥವಾ ಪೋರ್ಟಲ್ನಲ್ಲೂ ದೂರು ದಾಖಲಿಸಬಹುದು. 7-10 ಕಾರ್ಯದಿನದೊಳಗೆ ನಿಮ್ಮ ಸಮಸ್ಯೆ ಬಗೆಹರಿಯಬಹುದು.
Pic credit: Google
ಆರ್ಬಿಐ ನಿಯಮ
ಬ್ಯಾಂಕುಗಳು ಈ ರೀತಿಯ 45 ದಿನದೊಳಗೆ ಹಣವನ್ನು ಗ್ರಾಹಕರಿಗೆ ಮರಳಿಸಬೇಕು ಎನ್ನುವ ಆರ್ಬಿಐ ಅಪ್ಪಣೆ ಇದೆ. ಇಲ್ಲದಿದ್ದರೆ ದಂಡ ಬೀಳುತ್ತದೆ.
Pic credit: Google
ಹೊಸ ಯುಪಿಐ ರೂಲ್ಸ್
ಅತಿಹೆಚ್ಚು ಲಾಭದಲ್ಲಿರುವ ಬ್ಯಾಂಕ್ಗಳು
ಯಾಕೆ ಬೇಕು ಎಮರ್ಜೆನ್ಸಿ ಫಂಡ್?