ಯುಪಿಐ ಪೇಮೆಂಟ್; ಹೊಸ ಲಿಮಿಟ್

16 Sep 2025

Pic credit: Google

By: Vijayasarathy

ಸೆ. 15ರಿಂದ ವಿವಿಧ ಕೆಟಗರಿಗಳಿಗೆ ಯುಪಿಐ ಪೇಮೆಂಟ್ ಮಿತಿಯನ್ನು ಹೆಚ್ಚಿಸಲಾಗಿದೆ. ದಿನಕ್ಕೆ 10 ಲಕ್ಷ ರೂವರೆಗೆ ಮಿತಿ ಇದೆ.

ಸೆ. 15ರಿಂದ

Pic credit: Google

ವಿಮಾ ಪಾಲಿಸಿಗಳ ಪ್ರೀಮಿಯಮ್ ಪಾವತಿಗೆ, ಸಿಂಗಲ್ ಟ್ರಾನ್ಸಾಕ್ಷನ್​ಗೆ 5 ಲಕ್ಷ ರೂ, ಒಂದು ದಿನಕ್ಕೆ 10 ಲಕ್ಷ ರೂವರೆಗೆ ಮಿತಿ.

ಇನ್ಷೂರೆನ್ಸ್

Pic credit: Google

ಷೇರುಗಳು ಹಾಗೂ ಇತರ ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆಗೆ, ಸಿಂಗಲ್ ಟ್ರಾನ್ಸಾಕ್ಷನ್ 5 ಲಕ್ಷ ರೂ, ದಿನಕ್ಕೆ 10 ಲಕ್ಷ ರೂ ಮಿತಿ.

ಷೇರುಪೇಟೆ

Pic credit: Google

ಪ್ರವಾಸಗಳ ಬುಕಿಂಗ್ ಮತ್ತಿತರ ಸೇವೆಗೆ ಯುಪಿಐ ಪೇಮೆಂಟ್ ಮಾಡಲು ಸಿಂಗಲ್ ಟ್ರಾನ್ಸಾಕ್ಷನ್ 5 ಲಕ್ಷ ರೂ, ದಿನದ ಮಿತಿ 10 ಲಕ್ಷ ರೂ ಇದೆ.

ಪ್ರಯಾಣ

Pic credit: Google

ಕ್ರೆಡಿಟ್ ಕಾರ್ಡ್ ಬಿಲ್​ಗಳ ಪಾವತಿ ಮಿತಿಯನ್ನೂ ಯುಪಿಐನಲ್ಲಿ ಏರಿಸಲಾಗಿದೆ. ಸಿಂಗಲ್ ಟ್ರಾನ್ಸಾಕ್ಷನ್ 5 ಲಕ್ಷ ರೂ; ದಿನದ ಮಿತಿ 6 ಲಕ್ಷ ರೂ ಇದೆ.

ಕ್ರೆಡಿಟ್ ಕಾರ್ಡ್

Pic credit: Google

ಚಿನ್ನದ ಆಭರಣಗಳನ್ನು ಖರೀದಿಸುವಾಗ ಯುಪಿಐ ಮೂಲಕ ಸಿಂಗಲ್ ಟ್ರಾನ್ಸಾಕ್ಷನ್​ನಲ್ಲಿ 2 ಲಕ್ಷ ರೂ; ಒಂದು ದಿನದಲ್ಲಿ 6 ಲಕ್ಷ ರೂವರೆಗೆ ಪಾವತಿ ಸಾಧ್ಯ.

ಒಡವೆ

Pic credit: Google

ನೀವು ಅಂಗಡಿಗಳಲ್ಲಿ ಸಾಮಾನು ಖರೀದಿಸಿದಾಗ ಒಂದೇ ಟ್ರಾನ್ಸಾಕ್ಷನ್​ನಲ್ಲಿ 5 ಲಕ್ಷ ರೂ ಪಾವತಿ ಸಾಧ್ಯ. ದಿನಕ್ಕೆ ಮಿತಿ ಇಲ್ಲ. ಎಷ್ಟು ಬೇಕಾದರೂ ಪಾವತಿಸಿ.

ಅಂಗಡಿಗಳಲ್ಲಿ

Pic credit: Google

ಡಿಜಿಟಲ್ ಅಕೌಂಟ್ ತೆರೆಯಲು ಸಿಂಗಲ್ ಟ್ರಾನ್ಸಾಕ್ಷನ್​ನಲ್ಲಿ 5 ಲಕ್ಷ ರೂಗೆ ಮಿತಿ ಏರಿಸಲಾಗಿದೆ. ದಿನದ ಮಿತಿಯೂ 5 ಲಕ್ಷ ರೂ ಇದೆ.

ಡಿಜಿಟಲ್ ಅಕೌಂಟ್

Pic credit: Google