ಬಹಳ ಮುಖ್ಯ ಎಮರ್ಜೆನ್ಸಿ ಫಂಡ್

15 Sep 2025

Pic credit: Google

By: Vijayasarathy

ಎಮರ್ಜೆನ್ಸಿ ಫಂಡ್ ಇಟ್ಟುಕೊಳ್ಳುವುದು ಮುಖ್ಯ ಎಂದು ಬಹಳಷ್ಟು ಹಣಕಾಸು ತಜ್ಞರು ಹೇಳುವುದುಂಟು. ಈ ತುರ್ತು ನಿಧಿಯಿಂದ ಅಂಥದ್ದೇನು ಉಪಯೋಗ?

ಎಮರ್ಜೆನ್ಸಿ ಫಂಡ್

Pic credit: Google

ನಿಮ್ಮೆಲ್ಲಾ ಉಳಿತಾಯ ಹಣವನ್ನು ಹೂಡಿಕೆಗಳಿಗೆ ಉಪಯೋಗಿಸುತ್ತೀರಿ. ದಿಢೀರ್ ಖರ್ಚು ಬಂದಾಗ ಹೂಡಿಕೆ ಹಿಂಪಡೆಯಬೇಕಾದೀತು ಅಥವಾ ಸಾಲ ಮಾಡಬೇಕಾದೀತು.

ಅನಿರೀಕ್ಷಿತ ವೆಚ್ಚ

Pic credit: Google

ಎಮರ್ಜೆನ್ಸಿ ಫಂಡ್ ಎಂಬುದು ಇದ್ದರೆ ನೀವು ಸಣ್ಣ ವೆಚ್ಚಗಳಿಗೆ ಸಾಲ ಮಾಡುವ ಅವಶ್ಯಕತೆ ಇರುವುದಿಲ್ಲ. ಎಮರ್ಜೆನ್ಸಿ ಫಂಡ್​ನಿಂದಲೇ ಹಣ ಬಳಸಬಹುದು.

ಸಾಲ ತಪ್ಪಿಸಿ...

Pic credit: Google

ವೈದ್ಯಕೀಯ ವೆಚ್ಚ, ಉದ್ಯೋಗ ನಷ್ಟ, ವಾಹನ ರಿಪೇರಿ ಇತ್ಯಾದಿ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ನಿರ್ದಿಷ್ಟ ಮೊತ್ತವನ್ನು ಇಟ್ಟುಕೊಂಡಿರುವುದೇ ಎಮರ್ಜೆನ್ಸಿ ಫಂಡ್.

ಹೇಗಿರುತ್ತೆ ಈ ಫಂಡ್?

Pic credit: Google

ಮೂರರಿಂದ ಆರು ತಿಂಗಳ ನಿಮ್ಮ ಜೀವನವೆಚ್ಚವನ್ನು ಭರಿಸಲು ಸಾಕಾಗುವಷ್ಟು ಹಣವು ಎಮರ್ಜೆನ್ಸಿ ಫಂಡ್​ನಲ್ಲಿರಬೇಕು ಎನ್ನುತ್ತಾರೆ ತಜ್ಞರು.

ಎಷ್ಟಿರಬೇಕು ಹಣ?

Pic credit: Google

ಉದಾಹರಣೆಗೆ, ನಿಮ್ಮ ತಿಂಗಳ ವೆಚ್ಚ 50,000 ರೂ ಇದ್ದರೆ ಸುಮಾರು 2-3 ಲಕ್ಷ ರೂನಷ್ಟು ಹಣವನ್ನು ಎಮರ್ಜೆನ್ಸಿ ಫಂಡ್​ನಲ್ಲಿ ಇಟ್ಟುಕೊಂಡಿರಬೇಕು.

ಉದಾಹರಣೆಗೆ

Pic credit: Google

ನೀವು ಹಂತ ಹಂತವಾಗಿ ಎಮರ್ಜೆನ್ಸಿ ಫಂಡ್​ಗೆ ಹಣ ತುಂಬಿಸುತ್ತಾ ಹೋಗಬಹುದು. ಅದಕ್ಕೆಂದೇ ಪ್ರತ್ಯೇಕ ಸೇವಿಂಗ್ಸ್ ಅಕೌಂಟ್ ತೆರೆಯಬಹುದು.

ಎಲ್ಲಿರಬೇಕು ಹಣ?

Pic credit: Google

ಎಮರ್ಜೆನ್ಸಿ ಫಂಡ್​ನಲ್ಲಿರುವ ಹಣ ಎಷ್ಟು ಬಳಸುತ್ತೀರೋ, ಅಷ್ಟನ್ನು ಮತ್ತೆ ಜಮೆ ಮಾಡಿ. ಈ ರೀತಿ ಸುರಕ್ಷಿತ ಹಣಕಾಸು ಜೀವನ ರೂಪಿಸಬಹುದು.

ಮತ್ತೆ ತುಂಬಿ

Pic credit: Google