23 Sep 2025

ಸ್ಮಾರ್ಟ್ ಆಗಿ ಹಣ ನಿರ್ವಹಿಸಿ

Pic credit: Google

By: Vijayasarathy

ಹಣದ ರೂಲ್ 72

Pic credit: Google

ನಿಮ್ಮ ಹೂಡಿಕೆ ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ? ವಾರ್ಷಿಕ ಬಡ್ಡಿದರದಿಂದ 72 ಅನ್ನು ಭಾಗಿಸಿದರೆ ಬರುವ ಅಂಕಿಯೇ ಇದಕ್ಕೆ ಉತ್ತರ.

4:1 ನಿಯಮ

Pic credit: Google

ನಿಮ್ಮ ವಾರ್ಷಿಕ ವೆಚ್ಚದ 25 ಪಟ್ಟು ಮೊತ್ತ ನಿಮಗಿರಬೇಕು. ವರ್ಷಕ್ಕೆ 5 ಲಕ್ಷ ರೂ ವೆಚ್ಚ ಇದ್ದರೆ ಬೇಕಾಗುವ ಕಾರ್ಪಸ್ 1.25 ಕೋಟಿ ರೂ.

100 ಮೈನಸ್ ವಯಸ್ಸು

Pic credit: Google

ನಿಮ್ಮ ಹೂಡಿಕೆಯಲ್ಲಿ ಎಷ್ಟು ಈಕ್ವಿಟಿಗೆ ಹೋಗಬೇಕು? '100-Age' ರೂಲ್ ಬಳಸಿ. ವಯಸ್ಸು 30 ಅಗಿದ್ದರೆ 100-30 = 70. ಶೇ. 70 ಹಣ ಈಕ್ವಿಟಿಯಲ್ಲಿ ಹೂಡಿಕೆ ಆಗಬೇಕು.

10-5-3 ರೂಲ್

Pic credit: Google

ನಿಮ್ಮ ವಿವಿಧ ಹೂಡಿಕೆಗಳು ಎಷ್ಟು ರಿಟರ್ನ್ಸ್ ಕೊಡಬಹುದು? ಈಕ್ವಿಟಿಗಳು ಶೇ. 10, ಡೆಟ್​ಗಳು ಶೇ. 5, ಸೇವಿಂಗ್ಸ್ ಅಕೌಂಟ್ ಶೇ. 3ರಷ್ಟು ರಿಟರ್ನ್ ನಿರೀಕ್ಷಿಸಬಹುದು.

50-30-20 ರೂಲ್

Pic credit: Google

ಯಾವ್ಯಾವುದಕ್ಕೆ ಎಷ್ಟು ವ್ಯಯಿಸಬೇಕು? ಶೇ. 50 ವೆಚ್ಚವು ಅಗತ್ಯ ವಸ್ತುಗಳಿಗೆ; ಶೇ. 30 ವೆಚ್ಚ ಮನರಂಜನೆಗೆ; ಶೇ. 20 ವೆಚ್ಚ ಸೇವಿಂಗ್ಸ್ ಮತ್ತು ಹೂಡಿಕೆಗಳಿಗೆ ಬಳಕೆಯಾಗಬೇಕು.

3x ರೂಲ್

Pic credit: Google

ಎಮರ್ಜೆನ್ಸಿ ಫಂಡ್ ಬಹಳ ಅಗತ್ಯ. ನಿಮ್ಮ ಮಾಸಿಕ ಆದಾಯದ ಮೂರು ಪಟ್ಟು ಹಣವಾದರೂ ಎಮರ್ಜೆನ್ಸಿಗಾಗಿ ಪ್ರತ್ಯೇಕವಾಗಿ ಎತ್ತಿಟ್ಟಿರಬೇಕು.

40% ಇಎಂಐ

Pic credit: Google

ಹೋಮ್ ಲೋನ್ ಇತ್ಯಾದಿ ಯಾವುದೇ ಇಎಂಐಗಳ ಒಟ್ಟು ಮೊತ್ತವು ನಿಮ್ಮ ಆದಾಯದ ಶೇ. 40ಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.

20x ಲೈಫ್ ಇನ್ಷೂರೆನ್ಸ್

Pic credit: Google

ಲೈಫ್ ಇನ್ಷೂರೆನ್ಸ್​ನ ಖಾತ್ರಿ ಮೊತ್ತವು ವಾರ್ಷಿಕ ಆದಾಯಕ್ಕಿಂತ 20 ಪಟ್ಟು ಹೆಚ್ಚಿರಬೇಕು. 5 ಲಕ್ಷ ವಾರ್ಷಿಕ ಆದಾಯ ಇದ್ದರೆ 1 ಕೋಟಿ ರೂ ಸಮ್ ಅಶೂರ್ಡ್ ಇರಬೇಕು.