ಅನಲೆಮ್ಮಾ ಟವರ್; ಭೂಮಿಯ ಮೇಲೊಂದು ಮಾಯಾನಗರಿ

28 Aug 2025

Pic credit: Google

By: Vijayasarathy

ಪ್ರಭಾಸ್ ನಟಿಸಿರುವ ಕಲ್ಕಿ ಸಿನಿಮಾದಲ್ಲಿ ಆಕಾಶದಲ್ಲಿ ಒಂದು ದೊಡ್ಡ ನಗರ ಸೃಷ್ಟಿ ಮಾಡಲಾದ ದೃಶ್ಯ ನೋಡಿರಬಹುದು. ಅದು ವಾಸ್ತವವಾಗಿದ್ದರೆ ಎಷ್ಟು ಚೆಂದ..!

ಕಲ್ಕಿ ಕಲ್ಪನೆ

Pic credit: Google

ಗಾಳಿ ಗೋಪುರ ಪದ ಕೇಳಿರಬಹುದು. ಆಕಾಶದಲ್ಲಿ ಮನೆ ಕಟ್ಟುವುದು ವ್ಯರ್ಥ ಎನ್ನುತ್ತಾರೆ. ಆದರೆ, ಮನುಷ್ಯರು ಅಕ್ಷರಶಃ ಆಕಾಶ ಗೋಪುರ ನಿರ್ಮಿಸಲು ಹೊರಟಿದ್ದಾರೆ.

ಗಾಳಿ ಗೋಪುರವಾ?

Pic credit: Google

ಇಂಥದ್ದೊಂದು ಕಲ್ಪನೆಯನ್ನು ಸಾಕಾರಗೊಳಿಸಲು ಯತ್ನಿಸುತ್ತಿದ್ದಾರೆ. ದುಬೈನಲ್ಲಿ ಈ ಪ್ರಯತ್ನ ನಡೆದಿದೆ. ಇದು ಅಂತಿಂಥದ್ದಲ್ಲ...

ಕನಸು ಸಾಕಾರ

Pic credit: Google

ಕ್ಷುದ್ರಗ್ರಹದ ಕೆಳಗೆ ಜೋತಾಡುವ ಒಂದು ದೊಡ್ಡ ನಗರವನ್ನೇ ಸೃಷ್ಟಿಸುವ ಕಲ್ಪನೆ ಇದು. ಪ್ರಬಲವಾದ ಕೇಬಲ್​ಗಳು ಈ ನಗರವನ್ನು ಹಿಡಿದಿಡುತ್ತದೆ.

ಕೇಬಲ್​ನ ಬಲ

Pic credit: Google

ಇದರ ಹೆಸರು ಅನಲೆಮ್ಮಾ ಟವರ್. ಇದಕ್ಕೆ ಗಡಿಗಳಿಲ್ಲ, ರಸ್ತೆಗಳಿಲ್ಲ. ಸೌರ ವಿದ್ಯುತ್, ಮಳೆನೀರು ಸಂಗ್ರಹ ಇತ್ಯಾದಿಯ ನೆರವಿನಿಂದ ಈ ನಗರ ಕಾರ್ಯನಿರ್ವಹಿಸುತ್ತದೆ.

ಅನಲೆಮ್ಮಾ ಟವರ್

Pic credit: Google

ರಸ್ತೆ, ಗಡಿ ಇಲ್ಲವಾದರೂ ವಿಶೇಷ ಮನೆ, ಆಫೀಸ್, ಗಾರ್ಡನ್ ಇತ್ಯಾದಿ ಇರುತ್ತವೆ. ವಿವಿಧ ಸ್ತರಗಳು ಈ ಆಕಾಶ ನಗರದಲ್ಲಿ ಇರುತ್ತವೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಎಲಿವೇಟರ್​ಗಳಿರುತ್ತವೆ.

ರಸ್ತೆ, ಗಡಿ ಇಲ್ಲ

Pic credit: Google

8 ಅಂಕಿಯ ಆಕಾರದಲ್ಲಿ ಇದು ಭೂಮಿಯನ್ನು ಸುತ್ತುತ್ತದೆ. ದುಬೈನಿಂದ ಆರಂಭವಾಗಿ, 24 ಗಂಟೆಯಲ್ಲಿ ಭೂಮಿಯನ್ನು ಸುತ್ತಿ ಮತ್ತೆ ದುಬೈಗೆ ಬರುತ್ತದೆ.

ಭೂಮಿ ಸುತ್ತುತ್ತೆ

Pic credit: Google

ಸದ್ಯ ಈ ಅನಲೆಮ್ಮಾ ಟವರ್ ಎಂಬುದು ಇನ್ನೂ ಕಲ್ಪನೆಯ ಹಂತದಲ್ಲಿದೆ. ದುಬೈನ ಈ ಡ್ರೀಮ್ ಪ್ರಾಜೆಕ್ಟ್ ಕನಸು ನನಸಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

ನನಸಾಗುತ್ತಾ ಇದು?

Pic credit: Google