26 Oct 2025
Pic credit: Google
By: Vijayasarathy
ಚಿನ್ನದ ಬೆಲೆ ಸಖತ್ತಾಗಿ ಏರಿಕೆ ಆಗುತ್ತಿದೆ. ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 50ರಷ್ಟು ಹೆಚ್ಚಳ ಆಗಿದೆ. ಮುಂದಿನ ದೀಪಾವಳಿಗೆ ಚಿನ್ನದ ಬೆಲೆ 18,000 ರೂ ಮೀರಬಹುದು ಎನ್ನಲಾಗುತ್ತಿದೆ.
Pic credit: Google
20ನೇ ಶತಮಾನದಲ್ಲಿ ಬದುಕಿದ್ದ ಬಲ್ಗೇರಿಯಾದ ಬಾಬಾ ವಾಂಗಾ ನುಡಿದ ಭವಿಷ್ಯವಾಣಿ ಪ್ರಕಾರ ಚಿನ್ನದ ಬೆಲೆ 2025-26ರಲ್ಲಿ ಏರಿಕೆ ಆಗುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ.
Pic credit: Google
ವಾಂಗೇಲಿಯಾ ಗುಶ್ಟೆರೋವಾ ಅಕಾ ಬಾಬಾ ವಾಂಗಾ ಅಂಧರಾದರೂ ಭವಿಷ್ಯದ ಘಟನೆಗಳ ಬಲ್ಲವರಾಗಿದ್ದರು. 2ನೇ ವಿಶ್ವ ಮಹಾಯುದ್ಧ ಸೇರಿದಂತೆ ಅವರ ಅನೇಕ ಭವಿಷ್ಯವಾಣಿ ನಿಜವಾಗಿವೆ.
Pic credit: Google
ಬಾಬಾ ವಾಂಗಾ 2026ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಉಂಟಾಗಬಹುದು. ನಗದು ಹಣ ನಗಣ್ಯವಾಗಬಹುದು ಎಂಬುದು ಅವರು ನುಡಿದಿರುವ ಭವಿಷ್ಯವಾಣಿಯಾಗಿದೆ.
Pic credit: Google
ಅವರು ನುಡಿದ ಭವಿಷ್ಯದ ಪ್ರಕಾರ ಹಣಕಾಸು ವ್ಯವಸ್ಥೆ ಮುರುಟಿ ಹಣದ ಹರಿವು ಕಡಿಮೆ ಆಗಬಹುದು. ಇಂಥ ಪರಿಸ್ಥಿತಿಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ ಎಂಬುದು ತಜ್ಞರ ಅನಿಸಿಕೆ.
Pic credit: Google
ಹಿಂದೆಲ್ಲಾ ಆರ್ಥಿಕ ಹಿಂಜರಿತ ಆದಾಗ ಚಿನ್ನದ ಬೆಲೆ ಶೇ. 20ರಿಂದ 50ರವರೆಗೂ ಏರಿದ್ದಿದೆ. ಈಗ 2025 ಮತ್ತು 2026ರಲ್ಲೂ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
Pic credit: Google
ಬಾಬಾ ವಾಂಗಾ ನೇರವಾಗಿ ಚಿನ್ನದ ಬೆಲೆ ಏರುತ್ತೆ ಎಂದಿಲ್ಲ. ಆದರೆ, ಜಾಗತಿಕ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದಿದ್ದಾರೆ. ಚಿನ್ನದ ಬೆಲೆ ಏರುತ್ತಿರುವುದು ಅದರ ಸುಳಿವಾಗಿದೆ.
Pic credit: Google
ಟ್ಯಾರಿಫ್ ಕಂಟಕ, ವ್ಯಾಪಾರ ನಿರ್ಬಂಧಗಳು, ಯುದ್ಧ ಕಾರ್ಮೋಡಗಳು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಿವೆ. ಇದರ ಪರಿಣಾಮ ಚಿನ್ನದ ಬೆಲೆ ಏರುತ್ತಿರುವುದು ಹೌದು.
Pic credit: Google