ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಕಾರಣಗಳು

24 Oct 2025

Pic credit: Google

By: Vijayasarathy

ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 750ಕ್ಕಿಂತ ಕಡಿಮೆ ಇದ್ದರೆ ಅದು ಬ್ಯಾಂಕುಗಳಿಗೆ ರಿಸ್ಕಿ ಎನಿಸುತ್ತದೆ. ಆ ವ್ಯಕ್ತಿಗೆ ಕ್ರೆಡಿಟ್ ಕಾರ್ಡ್ ನೀಡಲು ಹಿಂದೇಟು ಹಾಕುತ್ತವೆ.

ಕಡಿಮೆ ಸ್ಕೋರ್

Pic credit: Google

ಪ್ರತೀ ಕ್ರೆಡಿಟ್ ಕಾರ್ಡ್​ಗೂ ಬ್ಯಾಂಕುಗಳು ಕನಿಷ್ಠ ಆದಾಯ ಮಿತಿ ನಿಗದಿ ಮಾಡುತ್ತವೆ. ವ್ಯಕ್ತಿಯ ಆದಾಯ ಈ ಮಿತಿಗಿಂತ ಕೆಳಗಿದ್ದರೆ ಕಾರ್ಡ್ ನೀಡದೇ ಹೋಗಬಹುದು.

ಆದಾಯ ಮಿತಿ

Pic credit: Google

ವ್ಯಕ್ತಿ ಈಗಾಗಲೇ ಹಲವು ಸಾಲ ಮತ್ತು ಇಎಂಐಗಳನ್ನು ಕಟ್ಟುತ್ತಿದ್ದರೆ, ಅವರಿಗೆ ಕ್ರೆಡಿಟ್ ಕಾರ್ಡ್ ಸಿಗುವ ಸಾಧ್ಯತೆ ಕಡಿಮೆ.

ವಿಪರೀತ ಸಾಲ

Pic credit: Google

ವ್ಯಕ್ತಿಯು ಒಂದು ಕಂಪನಿಯಲ್ಲಿ ಹೆಚ್ಚು ವರ್ಷ ಕೆಲಸ ಮಾಡದೆ ಪದೇ ಪದೇ ಉದ್ಯೋಗ ಬದಲಿಸುತ್ತಿದ್ದರೆ, ಅಂಥವರ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕೃತ ಗೊಳ್ಳಬಹುದು.

ಕೆಲಸ ಬದಲಾವಣೆ

Pic credit: Google

ಕ್ರೆಡಿಟ್ ಕಾರ್ಡ್ ಅರ್ಜಿ ತುಂಬುವಾಗ ಜನ್ಮದಿನಾಂಕ, ವಿಳಾಸ ಮತ್ತಿತರ ದಾಖಲೆಗಳ ವಿವರವನ್ನು ತಪ್ಪಾಗಿ ಹಾಕಿದ್ದರೆ, ಅದು ತಿರಸ್ಕಾರ ಆಗಬಹುದು.

ತಪ್ಪು ವಿವರ

Pic credit: Google

ಕಿರು ಅವಧಿಯಲ್ಲಿ ಹಲವು ಕ್ರೆಡಿಟ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಸಿದರೆ ಅದು ಬ್ಯಾಂಕುಗಳಿಗೆ ರೆಡ್ ಫ್ಲ್ಯಾಗ್. ಅಂಥ ಅರ್ಜಿಯನ್ನು ತಿರಸ್ಕರಿಸಬಹುದು.

ಹೆಚ್ಚು ಅರ್ಜಿಗಳು

Pic credit: Google

ಕೆಲ ಕ್ರೆಡಿಟ್ ಕಾರ್ಡ್​ಗಳನ್ನು 21 ರಿಂದ 60 ವರ್ಷದ ವಯೋಮಿತಿಯಲ್ಲಿರುವವರಿಗೆ ಮಾತ್ರ ನೀಡಲಾಗುತ್ತದೆ. ಬೇರೆಯವರಿಗೆ ಕಾರ್ಡ್ ಸಿಗದೇ ಹೋಗಬಹುದು.

ವಯಸ್ಸಿನ ಮಿತಿ

Pic credit: Google

ಈಗಾಗಲೇ ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿದ್ದು, ಅವುಗಳ ಬಿಲ್​ಗಗಳನ್ನು ಪೂರ್ತಿ ಕಟ್ಟದೇ ಉಳಿಸಿಕೊಂಡಿದ್ದರೆ, ಅಂಥವರ ಅರ್ಜಿ ತಿರಸ್ಕೃತ ಆಗಬಹುದು.

ಬಿಲ್ ಬಾಕಿ ಇದ್ದರೆ

Pic credit: Google