ಅತಿಹೆಚ್ಚು ಬಿಲಿಯನೇರ್ಸ್ ಇರುವ ದೇಶಗಳು

20 Oct 2025

Pic credit: Google

By: Vijayasarathy

ಬಿಲಿಯನೇರ್ಸ್ ಯಾರು?

Pic credit: Google

ಬಿಲಿಯನೇರ್​ಗಳೆಂದರೆ ಕನಿಷ್ಠ 1 ಬಿಲಿಯನ್ ಡಾಲರ್ (8,900 ಕೋಟಿ ರೂ) ಮೌಲ್ಯದ ಆಸ್ತಿ ಹೊಂದಿರುವ ವ್ಯಕ್ತಿ. ಅತಿಹೆಚ್ಚು ಬಿಲಿಯನೇರ್ಸ್ ಯಾವ ದೇಶಗಳಲ್ಲಿದ್ದಾರೆ?

7. ಇಟಲಿ

Pic credit: Google

ಇಟಲಿ ದೇಶದಲ್ಲಿ ಜಾಗತಿಕ ಫ್ಯಾಷನ್, ಲಕ್ಷುರಿ ವಸ್ತು ತಯಾರಕರು ನೆಲಸಿದ್ದು, ಇಲ್ಲಿ 74 ಬಿಲಿಯನೇರ್​ಗಳಿದ್ದಾರೆ.

6. ಕೆನಡಾ

Pic credit: Google

ಉತ್ತರ ಅಮೆರಿಕ ಖಂಡದ ಉತ್ತರದಲ್ಲಿರುವ ಕೆನಡಾದಲ್ಲಿ ಬಿಲಿಯನೇರ್​ಗಳ ಸಂಖ್ಯೆ ಈ ವರ್ಷ 67ರಿಂದ 76ಕ್ಕೆ ಏರಿದೆ.

5. ರಷ್ಯಾ

Pic credit: Google

ಬೃಹತ್ ರಷ್ಯಾ ದೇಶದಲ್ಲಿ 140 ಬಿಲಿಯನೇರ್​ಗಳಿದ್ದಾರೆ. ಉಕ್ರೇನ್ ಯುದ್ಧ, ಪಾಶ್ಚಿಮಾತ್ಯ ದೇಶಗಳಿಂದ ವ್ಯಾಪಾರ ನಿರ್ಬಂಧಗಳಿದ್ದಾಗ್ಯೂ ರಷ್ಯಾ ಆರ್ಥಿಕತೆ ಉಳಿದುಕೊಂಡಿದೆ.

4. ಜರ್ಮನಿ

Pic credit: Google

ಕಳೆದ ವರ್ಷ ಜರ್ಮನಿಯಲ್ಲಿ 132 ಬಿಲಿಯನೇರ್​ಗಳು ಇದ್ದರು. ಈ ವರ್ಷದ ಅವರ ಸಂಖ್ಯೆ 171ಕ್ಕೆ ಏರಿದೆ.

3. ಭಾರತ

Pic credit: Google

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಅಂಚಿನಲ್ಲಿ ಇರುವ ಭಾರತದಲ್ಲಿ 205 ಬಿಲಿಯನೇರ್​ಗಳಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

2. ಚೀನಾ

Pic credit: Google

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾದಲ್ಲಿ ಎರಡನೇ ಅತಿಹೆಚ್ಚು ಬಿಲಿಯನೇರ್ಸ್ ಇದ್ದಾರೆ. ಇಲ್ಲಿ ಇವರ ಸಂಖ್ಯೆ 450 ಇದೆ.

1. ಅಮೆರಿಕ

Pic credit: Google

ಅಮೆರಿಕದಲ್ಲಿ ಬರೋಬ್ಬರಿ 902 ಬಿಲಿಯನೇರ್​ಗಳಿದ್ದಾರೆ. ಜಾಗತಿಕ ಆರ್ಥಿಕತೆಯ ಕೇಂದ್ರಬಿಂದು ಎಂಬ ಹೆಗ್ಗಳಿಕೆ ಅಮೆರಿಕದ್ದು.