14 Oct 2025
Pic credit: Google
By: Vijayasarathy
ಇಪಿಎಫ್ ಸದಸ್ಯರು ತಮ್ಮ ಖಾತೆಗಳಲ್ಲಿ ಕನಿಷ್ಠ ಶೇ. 25ರಷ್ಟು ಬ್ಯಾಲನ್ಸ್ ಉಳಿಸಿಕೊಂಡಿರಬೇಕು. ಯಾವುದೇ ಹಂತದಲ್ಲಿ ಶೇ. 75ಕ್ಕಿಂತ ಹೆಚ್ಚು ವಿತ್ಡ್ರಾ ಅಸಾಧ್ಯ.
Pic credit: Google
ಇಪಿಎಫ್ ಸದಸ್ಯರು ಅರ್ಹ ಪಿಎಫ್ ಬ್ಯಾಲನ್ಸ್ನಲ್ಲಿ (ಶೇ. 75) ಎಲ್ಲವನ್ನೂ ವಿತ್ಡ್ರಾ ಮಾಡಬಹುದು. ಅಂದರೆ ಕನಿಷ್ಠ ಬ್ಯಾಲನ್ಸ್ ಬಿಟ್ಟು ಉಳಿದವನ್ನು ಪಡೆಯಲು ಅವಕಾಶ.
Pic credit: Google
ಶಿಕ್ಷಣ ಉದ್ದೇಶಕ್ಕೆ ಒಟ್ಟು 10 ಬಾರಿ ಪಿಎಫ್ ಹಣ ಹಿಂಪಡೆಯಬಹುದು. ಮದುವೆ ಕಾರಣಕ್ಕೆ 5 ಬಾರಿ ಪಡೆಯಬಹುದು. ಈ ಮೊದಲು 3 ಬಾರಿ ಮಾತ್ರ ಅವಕಾಶ ಇತ್ತು.
Pic credit: Google
ಭಾಗಶಃ ಇಪಿಎಫ್ ವಿತ್ಡ್ರಾ ಮಾಡುವ ನಿಯಮ ಸರಳಗೊಳಿಸಲಾಗಿದೆ. 13 ಸಂಕೀರ್ಣ ನಿಯಮಗಳ ಬದಲು ಸುಲಭವಾದ ಮೂರು ಕೆಟಗರಿ ಮಾಡಲಾಗಿದೆ.
Pic credit: Google
ಪ್ರಮುಖ ಅಗತ್ಯಗಳು, ಗೃಹ ಅವಶ್ಯಕತೆ ಮತ್ತು ವಿಶೇಷ ಸಂದರ್ಭಗಳೆಂದು ಮೂರು ವಿಭಾಗ ಮಾಡಲಾಗಿದೆ. ಪಿಎಫ್ ವಿತ್ಡ್ರಾ ಮಾಡುವಾಗ ಒಂದನ್ನು ಆಯ್ದುಕೊಳ್ಳಬಹುದು.
Pic credit: Google
ಭಾಗಶಃ ಪಿಎಫ್ ವಿತ್ಡ್ರಾ ಮಾಡುವಾಗ ವಿಶೇಷ ಸಂದರ್ಭ ಬಳಸಬಹುದು. ಇದಕ್ಕೆ ಬೇರೆ ಯಾವುದೇ ಕಾರಣ ನಮೂದಿಸುವ ಅಗತ್ಯ ಇಲ್ಲ.
Pic credit: Google
ಭಾಗಶಃ ಪಿಎಫ್ ವಿತ್ಡ್ರಾಯಲ್ ಮಾಡಲು ನಿರ್ದಿಷ್ಟ ಕಾರಣ ನೀಡಬೇಕಿಲ್ಲ, ಅದರ ದಾಖಲೆ ಸಲ್ಲಿಸಬೇಕಿಲ್ಲ. ಸುಲಭವಾಗಿ ಹಣ ಪಡೆಯಬಹುದು.
Pic credit: Google
ನಿವೃತ್ತಿಗೆ ಮುನ್ನ ಪೂರ್ಣ ಪಿಎಫ್ ಸೆಟಲ್ಮೆಂಟ್ ಮಾಡಿಕೊಳ್ಳಲು ಈಗಿರುವ ಎರಡು ತಿಂಗಳು ಬದಲು 36 ತಿಂಗಳು ಕಾಯಬೇಕಾಗುತ್ತದೆ.
Pic credit: Google