ಪೋಸ್ಟ್ ಆಫೀಸ್ ಸ್ಕೀಮ್ಸ್; ರಿಟರ್ನ್ಸ್ ಎಷ್ಟು ಗೊತ್ತಾ?

07 Sep 2025

Pic credit: Google

By: Vijayasarathy

ನ್ಯಾಷನಲ್ ಸೇವಿಂಗ್ಸ್ ರಿಕರಿಂಗ್ ಡೆಪಾಸಿಟ್ (ಆರ್​​ಡಿ) ಸ್ಕೀಮ್​ನಲ್ಲಿ ಶೇ. 6.7 ಬಡ್ಡಿ ಸಿಗುತ್ತದೆ. ಟೈಮ್ ಡೆಪಾಸಿಟ್​ನಲ್ಲಿ ಶೇ. 6.9ರಿಂದ ಶೇ. 7.5 ಬಡ್ಡಿ ಸಿಗುತ್ತದೆ.

ಆರ್​ಡಿ ಸ್ಕೀಮ್

Pic credit: Google

ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್​ನಲ್ಲಿ (ಎಂಐಎಸ್) 5 ವರ್ಷಕ್ಕೆ 9 ಲಕ್ಷ ರೂವರೆಗೆ ಡೆಪಾಸಿಟ್ ಮಾಡಬಹುದು. ಶೇ. 7.4 ವಾರ್ಷಿಕ ಬಡ್ಡಿಯಂತೆ ಮಾಸಿಕವಾಗಿ ಆದಾಯ ಸಿಗುತ್ತದೆ.

ಮಾಸಿಕ ಆದಾಯ

Pic credit: Google

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್​ಸಿಎಸ್​ಎಸ್) ಶೇ. 8.2 ಬಡ್ಡಿ ಸಿಗುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನವರು ಅರ್ಹರು. 30 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ.

ಎಸ್​ಸಿಎಸ್​ಎಸ್

Pic credit: Google

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) 15 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಶೇ. 7.1 ಬಡ್ಡಿ ಸಿಗುತ್ತದೆ. ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ ಅವಕಾಶ ಇದೆ.

ಪಿಪಿಎಫ್

Pic credit: Google

ಸುಕನ್ಯಾ ಸಮೃದ್ಧಿ ಅಕೌಂಟ್ ಅನ್ನು 10 ವರ್ಷದೊಳಗಿನ ವಯಸ್ಸಿನ ಬಾಲಕಿಯರಿಗೆಂದು ಇದೆ. ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ ಸಾಧ್ಯ. 21 ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ.

ಸುಕನ್ಯಾ ಸಮೃದ್ಧಿ

Pic credit: Google

ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆಯಲ್ಲಿ ಶೇ. 7.5 ಬಡ್ಡಿ ಸಿಗುತ್ತದೆ. ಯಾವುದೇ ಮಹಿಳೆ 2 ಲಕ್ಷ ರೂವರೆಗೆ ಡೆಪಾಸಿಟ್ ಮಾಡಬಹುದು. ಎರಡು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.

ಮಹಿಳಾ ಸಮ್ಮಾನ್

Pic credit: Google

ಕಿಸಾನ್ ವಿಕಾಸ್ ಪತ್ರ (ಕೆವಿಸಿ) ಸ್ಕೀಮ್​ನಲ್ಲಿ ಶೇ. 7.5 ಬಡ್ಡಿ ಸಿಗುತ್ತದೆ. ಹೂಡಿಕೆಗೆ ಮಿತಿ ಇಲ್ಲ. ನಿಮ್ಮ ಹಣ 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಕಿಸಾನ್ ವಿಕಾಸ್

Pic credit: Google

ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ) ಯೋಜನೆಯಲ್ಲಿ ಶೇ. 7.7 ಬಡ್ಡಿ ಸಿಗುತ್ತದೆ. ಹೂಡಿಕೆಗೆ ಮಿತಿ ಇರುವುದಿಲ್ಲ. ಐದು ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ.

ಎನ್​ಎಸ್​ಸಿ

Pic credit: Google