29 Sep 2025

Pic credit: Google

ಆಸ್ತಿ ಖರೀದಿಗೆ ಮುನ್ನ ಪರಿಶೀಲಿಸಬೇಕಾದ ಅಂಶಗಳು

By: Vijayasarathy

ನೀವು ಮನೆ ಅಥವಾ ನಿವೇಶನ ಖರೀದಿಸುತ್ತಿದ್ದರೆ ಕೆಲ ಮೂಲಭೂತ ಅಂಶಗಳನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಸಮಸ್ಯೆಗೆ ಸಿಲುಕ ಬೇಕಾಗಬಹುದು.

Pic credit: Google

ಅಗತ್ಯ ಸಂಗತಿಗಳು

ನೀವು ವಾಸಕ್ಕೆಂದು ಕೃಷಿ ಭೂಮಿಯನ್ನು ಖರೀದಿಸಿದ್ದರೆ ಅದು ಡಿಸಿ ಕನ್ವರ್ಷನ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.

Pic credit: Google

ದಾಖಲೆ ಪರಿಶೀಲಿಸಿ

ನೀವು ಖರೀದಿಸಲಿರುವ ಮನೆ ಅಥವಾ ನಿವೇಶನಕ್ಕೆ ಕಂದಾಯ ಕಟ್ಟಲಾಗುತ್ತಿದೆಯಾ ನೋಡಿ. ಸರಿಯಾದ ಖಾತಾ ಇಲ್ಲದಿದ್ದರೆ ಕಷ್ಟ.

Pic credit: Google

ಖಾತಾ ಪರಿಶೀಲಿಸಿ

ಸಬ್ ರಿಜಿಸ್ಟ್ರಾರ್ ಆಫೀಸ್​ಗೆ ಹೋಗಿ ಕಳೆದ 30 ವರ್ಷಗಳ ಎನ್ಕಂಬರೆನ್ಸ್ ಸರ್ಟಿಫಿಕೇಟ್ ಅಥವಾ ಇಸಿ ಅನ್ನು ಪಡೆದು ಪರಿಶೀಲಿಸಿ. ಇದು ಬಹಳ ಮುಖ್ಯ.

Pic credit: Google

ಎನ್ಕಮ್​ಬರೆನ್ಸ್ ಸರ್ಟಿಫಿಕೇಟ್

ಖರೀದಿಸಲಿರುವ ಮನೆ ಅಥವಾ ನಿವೇಶನ ಇರುವ ಬಡಾವಣೆಗೆ ರಸ್ತೆ, ನೀರು, ಚರಂಡಿ, ದೀಪ ಇತ್ಯಾದಿ ಮೂಲಸೌಕರ್ಯ ಚೆನ್ನಾಗಿದೆಯಾ ಎಂದು ಗಮನಿಸಿ.

Pic credit: Google

ಮೂಲಸೌಕರ್ಯ ಹೇಗಿದೆ?

ಮನೆ ಅಥವಾ ನಿವೇಶನದ ಆಸ್ತಿಪತ್ರವನ್ನು ಯಾರಾದರೂ ವಕೀಲರ ಬಳಿ ತೋರಿಸಿ ಪರಿಶೀಲನೆ ಮಾಡಿಸಿ. ಸರ್ಕಾರಿ ಜಮೀನು ಅತಿಕ್ರಮ ಮಾಡಿ ನಿವೇಶನವಾಗಿದ್ದರೆ ಕಷ್ಟ.

Pic credit: Google

ಆಸ್ತಿಪತ್ರಗಳ ಪರಿಶೀಲನೆ

ನೀವು ಹೊಸ ಲೇಔಟ್​ನಲ್ಲಿ ಆಸ್ತಿ ಖರೀದಿಸುತ್ತಿದ್ದರೆ, ಆ ಬಡಾವಣೆಗೆ ರೇರಾ ಅಥವಾ ಅಧಿಕೃತ ಪ್ರಾಧಿಕಾರದಿಂದ ಮಾನ್ಯತೆ ಇದೆಯಾ ಎಂದು ಪರಿಶೀಲಿಸಿ.

Pic credit: Google

ಲೇಔಟ್ ಅಧಿಕೃತವಾ?

ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿಗಳು ಸಿಕ್ಕಿವೆಯಾ ನೋಡಿ. ಬ್ಯುಲ್ಡಿಂಗ್ ಪರ್ಮಿಟ್, ಓಸಿ (ಆಕುಪೆನ್ಸಿ ಸರ್ಟಿಫಿಕೇಟ್) ಇತ್ಯಾದಿ ಇರಬೇಕು.

Pic credit: Google

ಅನುಮತಿಗಳಿವೆಯಾ?