06 Sep 2025
Pic credit: Google
By: Vijayasarathy
ಜನರು ವಹಿವಾಟು ನಡೆಸಲು ಹಣ ಬೇಕು. ವಿವಿಧ ಮುಖಬೆಲೆಯ ನಾಣ್ಯ ಮತ್ತು ನೋಟುಗಳನ್ನು ಮುದ್ರಿಸಲಾಗುತ್ತದೆ. ಇದಕ್ಕೆ ಎಷ್ಟೆಷ್ಟು ವೆಚ್ಚವಾಗುತ್ತದೆ, ಇಲ್ಲಿದೆ ಡೀಟೇಲ್ಸ್
Pic credit: Google
2018ರಲ್ಲಿ ಬಂದ ಮಾಹಿತಿ ಪ್ರಕಾರ ಒಂದು ರೂನ ಸಣ್ಣ ನಾಣ್ಯ ತಯಾರಿಸಲು 1 ರೂ 11 ಪೈಸೆ ವೆಚ್ಚ ಆಗುತ್ತದೆ. ಮುಖಬೆಲೆಗಿಂತ ಹೆಚ್ಚು ವ್ಯಯವಾಗುವುದು ಇದಕ್ಕೆ ಮಾತ್ರವೇ.
Pic credit: Google
2 ರೂ ಮುಖಬೆಲೆ ಕಾಯಿನ್ ತಯಾರಿಸಲು 1.28 ರೂ, 5 ರೂ ಮುಖಬೆಲೆಯ ನಾಣ್ಯಕ್ಕೆ 3.69 ರೂ, 10 ರೂ ಮುಖಬೆಲೆ ನಾಣ್ಯ 5.54 ರೂ ವೆಚ್ಚವಾಗುತ್ತದೆ.
Pic credit: Google
10 ರೂ ಮುಖಬೆಲೆಯ ನೋಟು ಮುದ್ರಿಸಲು 96 ಪೈಸೆ ವ್ಯಯವಾಗುತ್ತದೆ. 100 ರೂ ನೋಟಿಗೆ 1.77 ರೂ, 200 ರೂ ನೋಟಿಗೆ 2.37 ರೂ, 500 ರೂ ನೋಟಿಗೆ 2.29 ರೂ ವೆಚ್ಚವಾಗುತ್ತದೆ.
Pic credit: Google
ಹಿಂದಿನ ಸ್ಲೈಡ್ಗಳಲ್ಲಿ ತಿಳಿಸಿದ ವೆಚ್ಚದ ಲೆಕ್ಕ 2018ರದ್ದು. ವರ್ಷದಿಂದ ವರ್ಷಕ್ಕೆ ತಯಾರಿಕೆ ವೆಚ್ಚ ಹೆಚ್ಚುತ್ತಿದೆ. ಈಗ ಹೆಚ್ಚು ವ್ಯಯವಾಗುತ್ತಿರಬಹುದು.
Pic credit: Google
2024-25ರ ಹಣಕಾಸು ವರ್ಷದಲ್ಲಿ ನಾಣ್ಯ ಮತ್ತು ನೋಟುಗಳನ್ನು ತಯಾರಿಸಲು ಸರ್ಕಾರಕ್ಕೆ 6,372 ಕೋಟಿ ರೂ ವೆಚ್ಚವಾಗಿದೆ.
Pic credit: Google
ನಾಣ್ಯಗಳ ವಿನ್ಯಾಸದಿಂದ ಹಿಡಿದು ತಯಾರಿಕೆವರೆಗೆ ಸರ್ಕಾರದ ಸೆಕ್ಯೂರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಶನ್ (ಎಸ್ಪಿಎಂಸಿಐಎಲ್) ಮಾಡುತ್ತದೆ.
Pic credit: Google
ನೋಟುಗಳನ್ನು ಆರ್ಬಿಐನ ನೋಟು ಮುದ್ರಣ್ ಸಂಸ್ಥೆ ಮುದ್ರಿಸುತ್ತದೆ. ಮೈಸೂರು ಸೇರಿ ಎರಡು ಕಡೆ ಅದರ ಮುದ್ರಣ ಘಟಕಗಳಿವೆ.
Pic credit: Google