ಹೀಗಿರಬೇಕು  ಗಂಡ ಹೆಂಡತಿ Money ಟಾಕ್

17 Oct 2025

Pic credit: Google

By: Vijayasarathy

ಜಗಳ ಕಾಮನ್

ಈಗ ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಹಣ, ಖರ್ಚು ವಿಚಾರಕ್ಕೆ ಜಗಳ ಆಗುವುದು ಹೌದು ಸಾಮಾನ್ಯ...

Pic credit: Google

ಮುಕ್ತವಾಗಿ ಮಾತನಾಡಿ

ಕ್ಷುಲ್ಲಕ ಖರ್ಚು ವಿಚಾರಕ್ಕೆ ಶುರುವಾಗುವ ಜಗಳ ಇಬ್ಬರ ಸಂಬಂಧವನ್ನೇ ಹಾಳು ಮಾಡಬಹುದು. ಇದನ್ನು ತಪ್ಪಿಸಲು ಇಬ್ಬರೂ ಕೂಡ ಹಣದ ವಿಚಾರ ಮುಕ್ತವಾಗಿ ಮಾತನಾಡಬೇಕು.

Pic credit: Google

ಖರ್ಚಿನಲ್ಲಿ ಸಮಭಾಗಿ

ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ ಒಬ್ಬರ ಮೇಲೆಯೇ ಮನೆಯ ಎಲ್ಲಾ ಖರ್ಚು ಬರದಂತೆ ನೋಡಿಕೊಳ್ಳಿ. ವಿವಿಧ ಖರ್ಚುಗಳನ್ನು ಹಂಚಿಕೊಳ್ಳಿ.

Pic credit: Google

ಹೇಗೆ ಹಂಚಿಕೊಳ್ಳುತ್ತೀರಿ?

ಮನೆ ಬಾಡಿಗೆ, ದಿನಸಿ ವಸ್ತು, ಇಂಟರ್ನೆಟ್ ಇತ್ಯಾದಿ ಅಗತ್ಯ ಖರ್ಚುಗಳನ್ನು ಹೇಗೆ ಹಂಚಿಕೊಳ್ಳುವುದು ಎಂದು ಕೂತು ಮಾತಾಡಿ ನಿರ್ಧರಿಸಿಕೊಳ್ಳಿ.

Pic credit: Google

ಬಯಕೆ ಈಡೇರಿಕೆ

ವಿದೇಶಗಳ ಪ್ರವಾಸ ಬೇಕಾ? ಸ್ವಂತ ಮನೆ ಹೊಂದಬೇಕಾ? ಅದಕ್ಕೆ ಎಷ್ಟು ಹಣ ಕೂಡಿಡಬೇಕು? ಯಾರೆಷ್ಟು ಹಣ ಹೊಂದಿಸಬೇಕು? ಇವನ್ನು ಚರ್ಚಿಸಿ ನಿರ್ಧರಿಸಬೇಕು.

Pic credit: Google

ಮಕ್ಕಳ ಓದು

ಮಗುವಿನ ಶಿಕ್ಷಣದ ವೆಚ್ಚಕ್ಕೆ ಮೊದಲೇ ಯೋಜಿಸಿ. ಬೆಂಗಳೂರಿನಂತಹ ನಗರಗಳಲ್ಲಿ ಉತ್ತಮ ಶಾಲೆಯಲ್ಲಿ ಫೀಸ್ 1 ಲಕ್ಷ ರೂನಿಂದ ಶುರುವಾಗುತ್ತದೆ.

Pic credit: Google

ಮೊದಲೇ ಯೋಜಿಸಿ

ಹೊಸದಾಗಿ ಮದುವೆಯಾದಾಗಿನಿಂದಲೇ ಗಂಡ ಹೆಂಡತಿ ಇಬ್ಬರೂ ಮಗುವಿನ ಭವಿಷ್ಯದ ಬಗ್ಗೆ ಪ್ಲಾನ್ ಮಾಡಬೇಕು. ಎಸ್​ಐಪಿಯನ್ನು ಆರಂಭಿಸಬೇಕು.

Pic credit: Google

ಸಾಲ ಬೇಡ

ಇಬ್ಬರ ಆದಾಯದ ಇತಿಮಿತಿಯಲ್ಲಿ ಏನೇನು ಮಾಡಲು ಸಾಧ್ಯವೋ ಅದಷ್ಟನ್ನು ಮಾತ್ರವೇ ಮಾಡಿ. ಸಾಲಕ್ಕೆ ಸಿಲುಕಿದರೆ ಎಷ್ಟು ಕಷ್ಟ ಎಂಬುದನ್ನು ಸಂಗಾತಿಗೆ ವಿವರಿಸಿ.

Pic credit: Google